ಪ್ರಾಥಮಿಕ ಶಿಕ್ಷಣ ಸಚಿವರಿಗೆ ಪ್ರಾಥಮಿಕ‌ ಶಿಕ್ಷಣದ ಅವಶ್ಯಕತೆಇದೆ-ಕುಮಾರ್ ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಜೆಡಿಎಸ್ ಗೆ ಸೇರಿ ಸಮಾಜವಾದಿಯನ್ನ ಮುಳುಗಿಸಿ ಬಂದಿದ್ದಾರೆ. ಕಾಂಗ್ರೆಸ್ ನ್ನ ಮುಳುಗಿಸಲು ಹೆಚ್ಚು ದಿನ ಬೇಡ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನ ಹೆಸರಿಸದೆ ಮಾಜಿ ಸಚಿವ ಕುಮಾರ ಬಂಗಾರಪ್ಪ ವಾಗ್ದಾಳಿ ನಡೆಸಿದರು.

ಅವರು ನಗರದ ಪೆಸಿಟ್ ಕಾಲೇಜಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ‌ಜೆಪಿ ನಡ್ಡಾರವರ ನೇತೃತ್ವದಲ್ಲಿ ನಡೆದ ಬಿಜೆಪಿ ಕರ್ನಾಟಕ ವೃತ್ತಿ ಪರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಮಾರ್ಚ್ ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ಪ್ರಧಾನಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕುಮಾರ್‌ಬಂಗಾರಪ್ಪ ನಡ್ಡಾರವರ ಕಾರಗಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸೊರಬದ ಪ್ರಚಾರ ಸಭೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ ವಾಗ್ದಾಳಿಗೂ ಮುನ್ನಾ ಮಾತನಾಡಿದ ಮಾಜಿ ಸಚಿವರು ಜಿಲ್ಲೆಯಲ್ಲಿ ಗೇಣಿದಾರರಿಂದ ಸಿಕ್ಕಿದ ಭೂಮಿಯನ್ನ ಮಾಫಿಯಾ ಮಾಡಲಾಗಿದೆ. ಹಾಗೆ ಆಗಬಾರದು ಎಂಬುದು ಬಿಜೆಪಿಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ಆದರೆ ಯಾವ ಉದ್ದೇಶಕ್ಕೆ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಬಂತೋ‌ಇಂದು ಬದಲಾಗಿದೆ. ಅವ್ಯವಹಾರವೇ ಹೆಚ್ಚಾಗಿದೆ. ಅದನ್ನ ಕೋರ್ಟ್ ಹೊಡೆದು ಹಾಕಿದೆ. ತೀ.ನಾಶ್ರೀ ಶಾಶ್ವತವಾಗಿ ಮುಳುಗಡೆ ಸಂತ್ರಸ್ತ್ರಿಗೆ ಪರಿಹಾರ ಕೊಡಿಸಲು ಮುಂದಾದರೆ ಅವರೇ ಒಂದು ಸಮಿತಿ ರಚಿಸಿಕೊಂಡು ಅಡ್ಡಗಾಲಾಗಿದ್ದಾರೆ ಎಂದು ಆರೋಪಿಸಿದರು.

ಭೂಮಿಯ ಹಕ್ಕು ಕೊಡುವ ವಿಷಯದಲ್ಲಿ ವಿಧಾನ ಸಭೆ ಚುನಾವಣೆ ವೇಳೆ ಡಿಕೆಶಿ ಮತ್ತು ಸಿದ್ದರಾಮಯ್ಯ ರುದ್ರತಾಂಡವ ಆಡಿದ್ದರು ಇವತ್ತು ನಾಟ್ಯ ಮಾಡ್ತಾ ಇದ್ದಾರೆ. ರಾಜ್ ಕುಮಾರ್ ಹೆಸರು ಬಳಸಿಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ರಾಜ್ ಕುಮಾರ್ ಗೆ ರಾಜಕಾರಣದಲ್ಲಿ ಆಸಕ್ತಿ ಇತ್ತು ಎಂದು ಹೇಳಲಾಗುತ್ತಿದೆ. ಆದರೆ ರಾಜ್ ಕುಟುಂಬಕ್ಕೆ ಆಸಕ್ತಿ ಇರಲಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತು ಎಂದರು.

ಪ್ರಾಥನಿಕ ಸಚಿವರಿಗೆ ಪ್ರಾಥಮಿಕ ಶಿಕ್ಷಣದ ಅಶ್ಯಕತೆ ಇದೆ. ಸುಶಿಕ್ಷಣ ಬೇಕಿದೆ. ಹಿರಿಯರಿಗೆ ಗೌರವ ಕೊಡುವುದು ಗೊತ್ತಿಲ್ಲ. ಕುಟುಂಬ,ಜಾತಿ ಬಗ್ಗೆನೆ ಮಾತನಾಡುವುದಾದರೆ ಪುಟಗಟ್ಟಲೆ ಮಾತನಾಡುವೆ. ಜಾತಿ ಒಂದೆಡೆ ವಾಲಲಿದೆ ಎಂದರೆ ಸತ್ಯಕ್ಕೆ ದೂರವಾದ ಮಾತುಗಳು ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ವೈ ಸೊರಬ ಮತ್ತು ಶಿಕಾರಿಪುರವನ್ನ ಒಂದು ತೂಕವೂ ಹೆಚ್ಚುಕಡಿ‌ಮೆಯಾಗದಂತೆ ನೋಡಿಕೊಂಡಿದ್ದಾರೆ. ಕಾಂಗ್ರೆಸ್ ನ ಸಚಿವರು ಆಯ್ಕೆಯಾಗಿ ಜೊತೆಯಲ್ಲಿ ಬರಗಾಲ ತಂದರು.‌ ಶಿವಮೊಗ್ಗ ಲೋಕಸಭಾ‌ಕ್ಷೇತ್ರದ ಕಾಂಗ್ರೆಸ್ ನ ಅಭ್ಯರ್ಥಿಗಳು ಮತಚಲಾಯಿಸಿದ್ದು ಬೆಂಗಳೂರಲ್ಲಿ. ಇವರಿಗೆ ಗ್ರಾಮಪಂಚಾಯಿತಿ ಚುನಾವಣೆ ಗೆಲ್ಲಲು ಆಗದವರು ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಅವರ‌ ಓಟು ಇಲ್ಲಿ ಇಲ್ಲ. ಇನ್ನು ನಮ್ಮ ಓಟು ಏನು ಕೇಳ್ತಾರೆ ಎಂದು ಟೇಬಲ್ ಕುಟ್ಟಿ ಮಾತನಾಡಿದರು.

ಈಗಿನ ಸಚಿವರು ಮೊದಲಿಗೆ ಸ್ಪರ್ಧೆ ಮಾಡಿದ್ದು ಬಿಜೆಪಿಯಿಂದ, ನಂತರ ಜಂಪಾಗಿದ್ದು ಸಮಾಜವಾದಿ ಪಕ್ಷಕ್ಕೆ. ಸಾಹೇಬರನ್ನ ತಂದು ನಿಲ್ಲಿಸಿದ್ದು ಜೆಡಿಎಸ್ ನಲ್ಲಿ ನಂತರ ಸಾಹೇಬರನ್ನ ಅತಂತ್ರವಾಗಿ ಮಾಡಿದರು. ಬಂಗಾರಪ್ಪನವರನ್ನ ಹಾಳು ಮಾಡಿದ್ದು ಇದೇ ಗ್ಯಾಂಗ್ ಎಂದು ವಾಗ್ದಾಳಿ ನಡೆಸಿದರು.

ಮೈಕ್ ಹಚ್ಚಿ ಆಟೋ ರಿಕ್ಷ ಬಿಟ್ಟಿದ್ದಾರೆ. ಅವರು ದೊಡ್ಡರಿದ್ದಾರೆ ಎಂದು ಈಶ್ವರಪ್ಪನವರ ಹೆಸರು ತೆಗೆದುಕೊಳ್ಳದೆ ಮಾತನಾಡಿದ ಕುಮಾರ್ ಬಂಗಾರಪ್ಪ ಅವರ ಸ್ಪರ್ಧೆ ವಿವೇಚನೆಗೆ ಬಿಟ್ಟಿದ್ದು. ರಾಜಕೀಯ ಅಲ್ಲೋಲಕಲ್ಲೋಲವಾಗುವ ಸಂಭವಿಸುವ ಕ್ಷಣ ಬಹಳ ದೂರವಿಲ್ಲವೆಂದು ಭವಿಷ್ಯ ನುಡಿದರು.

ಇದನ್ನೂ ಓದಿ-https://suddilive.in/archives/13886

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket