ರಾಜಕಾರಣದಲ್ಲಿ ಡ್ಯಾನ್ಸ್ ಬೇಡ, ಸಿನಿಮಾರಂಗದಲ್ಲಿ ಇರಲಿ-ಕುಮಾರ್ ಬಂಗಾರಪ್ಪ ಸಲಹೆ

ಸುದ್ದಿಲೈವ್/ಶಿವಮೊಗ್ಗ

ಎರಡನೇ ಹಂತದ ಮತದಾನಕ್ಕೆ ರಾಜ್ಯ ಸಜ್ಜಾಗಿದ್ದು ಪ್ರಚಾರದ ಭರಾಟೆ ಭರ್ಜರಿಯಾಗಿದೆ. ವಿಧಾನ ಸಭೆ ಚುನಾವಣೆಯಲ್ಲಿ ಸೋತ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಂತರದ ದಿನಗಳಲ್ಲಿ ಪಕ್ಷದ ಜೊತೆ ಗುರುತಿಸಿಕೊಂಡಿರಲಿಲ್ಲ.‌

ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕುಮಾರ ಬಂಗಾರಪ್ಪ ಚುನಾವಣೆಯ ವೇಳೆ ಸಂಸದ ರಾಘವೇಂದ್ರರ ಜೊತೆ ಪ್ರಚಾರದಲ್ಲಿ ಸೊರಬದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.‌ ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರವರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ಮತದಾನಕ್ಕೆ ಕೆಲ ದಿನಗಳು ಮಾತ್ರ ಬಾಕಿ ಇರುವ ಸಮಯದಲ್ಲಿ ಕುಮಾರ್ ಬಂಗಾರಪ್ಪ ಅವರ ಎಂಟ್ರಿ ಸಹೋದರ, ಸಹೋದರಿ ಭಾವರ ವಿರುದ್ಧ ಆರೋಪ ಮಾಡಿದ್ದಾರೆ.  ರಾಜಕಾರಣದಲ್ಲಿ ಡ್ಯಾನ್ಸ್ ಬೇಡ ಎಂದು ಕಾಂಗ್ರೆಸ್ ನ ಅಭ್ಯರ್ಥಿ ಗೀತರವರ ಪತಿ ಹಾಗೂ ನಟ ಶಿವರಾಜ್ ಕುಮಾರ್ ಗೆ ಸಲಹೆ ನೀಡಿದ್ದಾರೆ.

ಗೀತರಿಗೆ ಆಶೀರ್ವಾದ ಮಾಡಿದರೆ ಐದು ವರ್ಷ ನಿಮ್ಮೊಂದಿಗೆ ಇದ್ದು ಡ್ಯಾನ್ಸು, ಹಾಡು ಎಲ್ಲಾ ಮಾಡುವೆ ಎಂದು ಪ್ರಚಾರದಲ್ಲಿ ನಟ ಶಿವರಾಜ್ ಕುಮಾರ್ ಹೇಳ್ತಾ ಬಂದಿದ್ದಾರೆ. ನಿಮ್ಮ ನಟನೆ, ಡ್ಯಾನ್ಸ್ ಎಲ್ಲವೂ ಸಿನಿಮಾ ರಂಗದಲ್ಲಿ ಇರಲಿ ರಾಜಕಾರಣದೊಂದಿಗೆ ಬೆರಸಬೇಡಿ ಎಂದು ಸಲಹೆ ನೀಡಿದರು.

10 ವರ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೀತರವರನ್ನ ಕಣಕ್ಕಿಳಿಸಲಾಗಿತ್ತು. ಆದರೆ ತಮ್ಮ‌ ಮತಗಳನ್ನ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಕ. 2013 ರಲ್ಲಿ ಇವರುಗಳು ಸ್ವಾರ್ಥ ರಾಜಕಾರಣ ನಡೆಸಿರುವುದು ಅಚ್ಚಹಸಿರಾಗಿದೆ. ನಮ್ಮ ತಾಯಿ ಶಂಕುತಲಾ ದೇವಿಯನ್ನ 2013 ರಲ್ಲಿ ಕೀಮೋ ಥೆರಪಿ ಮಾಡಿಸಿಕೊಂಡು ಅಂಬ್ಯುಲೆನ್ಸ್ ಮೂಲಕ‌ ಭದ್ರಾವತಿಗೆ ಕರೆತಂದು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಇದು ಸ್ವಾರ್ಥ ಅಲ್ಲವೇ ಎಂದು ದೂರಿದರು.

ಬಗುರ್ ಹುಕುಂ ವಿಚಾರದಲ್ಲಿ ತೀನಾ‌ಶ್ರೀನಿವಾಸ್ ನನ್ನ ವಿರುದ್ಧ ಆರೋಪಿಸಿದ್ದಾರೆ.‌ ನ್ಯಾಯಾಲಯದ ಪ್ರಕರಣವನ್ನ ನಾನು ತೀರ್ಮಾನಿಸಲಾಗುತ್ತದಾ? ತೀನಾ ಅವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದರು.

ಚಿತ್ರರಂಗ ನನ್ನ‌ಹಿಂದೆ ಎಂದು ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ.‌ ಇದು ಸತ್ಯಕ್ಕೆ ದೂರವಾದ ಮಾತು ಕಳೆದ ಬಾರಿ ದರ್ಶನ್ ಸುಮಲತಾರ ಪರ ಪ್ರಚಾರ ಮಾಡಿದ್ದರು‌ಈ ಬಾರಿ ಕಾಂಗ್ರೆಸ್ ನಲ್ಲಿಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಎಲ್ಲರೂ ಶಿವರಾಜ್ ಕುಮಾರ್ ಬೆನ್ನ‌ಹಿಂದೆ ಇಲ್ಲ ಎಂದರು.

ಶಿವರಾಜ್ ಕುಮಾರ್ ತನ್ನ ಪತ್ನಿಯನ್ನಗೆಲ್ಲಿಸಲು ಬಂದಿರುವುದಾಗಿ ಹೇಳ್ತಾರೆ. ರಾಜಕಾರಣ ಹೆಚ್ಚು ಗೊತ್ತಿಲ್ಲ ಎನ್ನುತ್ತಾರೆ.‌ ಸರಿ ಅಭ್ಯರ್ಥಿಗೆ ಕೇಳಿದರೆ ನನಗೂ ಗೊತ್ತಿಲ್ಲ ಎನ್ನುತ್ತಾರೆ ಮರು ಪ್ರಶ್ನಿಸಿದರೆ ನಾನು ಹೇಳುವಷ್ಟು ಬರೆದುಕೊಳ್ಳಿ ಎಂದು ತಾಕೀತು ಮಾಡ್ತಾರೆ. ದಬ್ವಾಳಿಕೆಯ ರಾಜಕಾರಣವನ್ನ ಸಹಿಸಲು ಆಗೊಲ್ಲ ಎಂದು ಆಗ್ರಹಿಸಿದರು.

ಪ್ರಬಲ ಜಾತಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಸಣ್ಣಪುಟ್ಟ ಸಮುದಾಯ ಎಲ್ಲಿಗೆ ಹೋಗಬೇಕು. ಜಾತಿ ಮತಕ್ಕಿಂದ ದೇಶಕ್ಕೆ ಮತ ಹಾಕುವುದು ಅವಶ್ಯಕತೆಯಿದೆ. ರೈಲ್ವೆ ಹೈವೆ ವಿದ್ಯುತ್ ಉತ್ಪಾದನೆ ಬಗ್ಗೆ ಪರಿಕಲ್ಪನೆ ಇಲ್ಲ. ಅಕ್ಕನ ಬಗ್ಗೆ ಮಾತನಾಡಿದರೆ ಹುಷಾರ್ ಎನ್ನುವ ಮಧು ಬಂಗಾರಪ್ಪರಿಗೆ ಕ್ಲಾಸ್ ತೆಗೆದುಕೊಂಡ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇದು ಯುದ್ದ, ಯುದ್ಧದ ಸಮಯದಲ್ಲಿ ಅಣ್ಣ‌ತಮ್ಮ ಎಂಬ ಸಂಬಂಧವಿಲ್ಲ ಎಂದು ಬುದ್ದಿವಾದ ಹೇಳಿದರು.

ಸಣ್ಣ ವಯಸ್ಸಿನಲ್ಲಿ ಸಂಪರ್ಕ ಬೆಳೆದಿದೆ ಇದು ಬಂಗಾರಪ್ಪನವರಿಂದ ಸಾಧ್ಯವಾಗಿದ್ದು. ಜಾತಿ ಮತ್ತು ಬಲದಿಂದ ಏನು ಬೇಕಾದರು ಮಾಡಬಹುದು ಎಂದು ತಿಳಿದುಕೊಂಡಿದ್ದಾರೆ. ನಾನ್ ಬೇಲಬಲ್ ವಾರೆಂಟ್ ಹಿಡಿದು ಓಡಾಡುತ್ತಿದ್ದೀರ. ಸಾಗರ ಶಾಸಕರು ಮಧು ವಿರುದ್ದ ಮಾತನಾಡಿದ್ದು ಗೊತ್ತಿದೆ. ಚುನಾವಣೆ ನಂತರ ಇದು ಮತ್ತೆ ಸ್ಪೋಟಗೊಳ್ಳುವ ಸಾಧ್ಯತೆ ಇದೆ ಎಂದರು.

ಎಂಪಿ ರಾಘವೇಂದ್ರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ 20 ಸಾವಿರ ಅನುದಾನ ನಿಮಗೆ ಸಿಗುತ್ತಿದೆ. ಪ್ರಾಥಮಿಕ ಶಿಕ್ಷಣ ಸಚಿವರಿಗೆ ಪ್ರಾಥಮಿಕ ಜ್ಞಾನವೇ ಇಲ್ಲ. ಪಿಯುಸಿ ಯಾವ ಕಾಲೇಜಿನಲ್ಲಿ ಮಾಡಿದ್ಯಾ? ಡಿಗ್ರಿ ಮುಗಿಸಿದ್ದೀರಾ? ಯಾವ ಕಾಲೇಜು ಪದವಿ ನೀಡಿದೆ ಎಂಬುದನ್ನ ಸ್ಪಷ್ಟಪಡಿಸಲಿ ಎಂದರು.

ಅವರು ಶಿಕ್ಷಣ ಸಚಿವರಾದಾಗ ರಾಜ್ಯ ಎಂಥಹ ಸ್ಥಿತಿಗೆ ಬಂತು ಎಂಬುದು ಗೊತ್ತಾಗುತ್ತದೆ. ಸೌಜನ್ಯದಿಂದ ಜನರಿಗೆ ಮತ್ತು ಮಾಧ್ಯಮದೊಂದಿಗೆ ವರ್ತಿಸುವು ಪ್ರಾಥಮಿಕ‌ ಶಿಕ್ಷಣದ ಅವಶ್ಯಕತೆ ಇದೆ ಎಂದರು.

80 ಎಕರೆ ಆಸ್ತಿಯ ಶರಾವತಿ ಡೆಂಟಲ್ ಕಾಲೇಜಿನಲ್ಲಿ 90% ಆಸ್ತಿಯನ್ನ‌ ಮಾರಾಟ ಮಾಡಲಾಗಿದೆ ಎಂದ ಕುಮಾರ್ ಬಂಗಾರಪ್ಪ ಈ‌ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 100 ಕ್ಕೆ 100 ಸೋಲುವುದು ಸತ್ಯ. ಸುಳ್ಳಿನ ಸರಮಾಲೆಯನ್ನ ಕಾಂಗ್ರೆಸ್ ಹೇಳ್ತಾಇದೆ. ಸರ್ಟಿಫಿಕೇಟ್ ಗಾಗಿ ಅವರು ಚುನಾವಣೆ ಸ್ಪರ್ಧೆಗೆ ಇಳಿದಿದ್ದಾರೆ. ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/13918

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close