ಪ್ರಜ್ವಲ್ ರೇವಣ್ಣ ಉಚ್ಚಾಟನೆ-ಕುಮಾರ ಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ ನಾಯಕರಾದ ದೇವೆಗೌಡರ ಬಳಿ ಚರ್ಚಿಸ ಬಂದಿದ್ದೆ. ಅದರಂತೆ ನಮ್ಮ ಹಿರಿಯರಾದ ದೇವೆಗೌಡರು ಪ್ರಜ್ವಲ್ ಅವರನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿ, ನಾನು ನಿನ್ನೆಯೇ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದೆ.ನಾವು ಹೆಚ್.ಡಿ. ರೇವಣ್ಣ ಬೇರೆ, ಬೇರೆಯಾಗಿದ್ದೆವೆ.ಅವರ ಕುಟುಂಬವೇ ಬೇರೆ, ನಮ್ಮ ಕುಟುಂಬವೇ ಬೇರೆ. ನಮ್ಮ ಬಿಜಿನೆಸ್, ಬೇರೆ ಅವರ ಬಿಜಿನೆಸ್ ಬೇರೆ ಇದೆ ಎಂದರು.

ನಾವು ಒಟ್ಟು ಕುಟುಂಬದಲ್ಲಿ ಇಲ್ಲ. ಈ ವಿಚಾರವನ್ನು ದೇವೆಗೌಡರ ಕುಟುಂಬಕ್ಕೆ ಸೇರಿಸಬೇಡಿ. ರೇವಣ್ಣ, ಅವರ ಪತ್ನಿ ಅವರ ಇಬ್ಬರು ಮಕ್ಕಳು ಬೇರೆ ಇರ್ತಾರೆ.ಯುವಕರು ಎಲ್ಲಿಗೆ ಹೋಗುತ್ತಾರೆಂದು ನಮಗೆ ಗೊತ್ತಿರಲ್ಲ. ಅವರು ನಮಗೆ ಹೇಳಿ ಎಲ್ಲೂ ಹೋಗಲ್ಲ ಎಂದರು.

ಯಾರು ಏನು ಮಾಡ್ತಾರೆ ಎಂಬುದು ನಮಗೆ ಗೊತ್ತಿರಲ್ಲ. ಹಾಸನದಲ್ಲಿ ಮಹಿಳೆಯರ ಭಾರಿ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾರ ವಿರುದ್ಧ ಪ್ರತಿಭಟನೆ ಮಾಡ್ತಾರೆ ಅವರು ?ನಮ್ಮ ಮನೆ ಮುಂದೆ ಬಂದು ಕೆಲವರು ಪ್ರತಿಭಟನೆ ಮಾಡಿದ್ದಾರಂತೆ.

ಅದಕ್ಕೂ ನನಗೂ ಏನ್ ಸಂಬಂಧ ನೀವೆ ಹೇಳಿ ಎಂದ ಕುಮಾರ ಸ್ವಾಮಿ, ಪ್ರತಿಭಟನೆ ನಡೆಸುವವರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಸ್.ಐ.ಟಿ.‌ ತನಿಖೆ ನಡೆಸುತ್ತಿದೆ. ಆದರೆ ಯಾರು 1 ಲಕ್ಷ ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದಿದರು.

ಇದನ್ನೂ ಓದಿ-https://suddilive.in/archives/13830

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close