ಸುದ್ದಿಲೈವ್/ಶಿವಮೊಗ್ಗ
ರೀಚಾರ್ಜ್ ಆಗಿ ಬಂದಿದ್ದಾರೆ, ಚುನಾವಣೆ ಸೋತ ನಂತರ ಎಲ್ಲಿಗೆ ಹೋಗಿದ್ದರು? ರೀಚಾರ್ಜ್ ಗೆ ಹಣ ಎಷ್ಟು ತೆಗೆದುಕೊಂಡಿದ್ದಾರೆ ಎಂಬ ಸಚಿವ ಮಧು ಬಂಗಾರಪ್ಪನವರ ಆರೋಪಕ್ಕೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಉತ್ತರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರ್ ಬಂಗಾರಪ್ಪ ರೀಚಾರ್ಜ್ ಗೆ ನಮ್ಮ ಪಕ್ಷದಲ್ಲಿ ಚುನಾವಣೆ ಸೋತ ನಂತರ ಕೆಲ ವೈಮನಸ್ಸು ಉಂಟಾಗಿತ್ತು. ಅಲ್ಲಿ ಸರಿ ಮಾಡಿಕೊಳ್ಳದೆ ನಾನು ಪ್ರಚಾರಕ್ಕೆ ಬರುವುದು ಸರಿಯಿರಲಿಲ್ಲ ಎನಿಸಿತ್ತು. ಹಾಗಾಗಿ ದೂರ ಇದ್ದೆ.
ನಮ್ಮ ಅಧ್ಯಕ್ಷರು ಎಲ್ಲವನ್ನೂ ಸರಿಪಡಿಸಿರುವುದರಿಂದ ಮತ್ತೆ ಚುನಾಣೆ ಪ್ರಚಾರಕ್ಕೆ ಬಂದಿರುವೆ ಎಂದು ರೀಚಾರಗಜ್ ಮತ್ತು ಚುನಾವಣೆಯಲ್ಲಿ ಸೋತ ನಂತರ ಎಲ್ಲಿದ್ದೆ ಎಂಬುದನ್ನ ಸ್ಪಷ್ಟಪಡಿಸಿದರು.
ನಾನುನಿಷ್ಪಕ್ಷ ಪಾತವಾಗಿ ರಾಜಕಾರಣದಲ್ಲಿ ಇದ್ದೇನೆ. ಯಾವುದೇ ಭ್ರಷ್ಠಾಚಾರದ ಆರೋಪವಿಲ್ಲ. ಜೊತೆಗೆ ಸಚಿವರ ಸರ್ಟಿಫಿಕೇಟ್ ನಲಬೇಡ ಎಂದು ಆಗ್ರಿಸಿದರು.
ಇದನ್ನೂ ಓದಿ-https://suddilive.in/archives/13925