ಸುದ್ದಿಲೈವ್/ಶಿವಮೊಗ್ಗ
ಗಾಂಧಿ ಬಜಾರ್ ನಲ್ಲಿರುವ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಗಿಲು ಮುರಿದು ಕಳ್ಳತನ ನಡೆದಿದೆ. ಸುಮಾರು 2 ಲಕ್ಷ ರೂ ಮೌಲ್ಯದ ನಗದ ಮತ್ತು ಚಿನ್ನಾಭರಣ ಕಳುವಾಗಿದೆ.
ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿರುವ ಶ್ರೀ ಕಾಳಿಕಾ ಪರಮೇಶ್ವರಿ ದೇವಾಸ್ಥಾನದಲ್ಲಿ ಬೀಗ ಮುರಿದು ದೇವಾಸ್ಥಾನದ ಗರ್ಭಗುಡಿಗೆ ಹಾಕಿದ್ದ ಬೀಗಗಳನ್ನು ಸಹ ಮುರಿದು ದೇವರಿಗೆ ಧರಿಸಿದ್ದ ಬೆಳ್ಳಿಯ ಕಿರೀಟ 480 ಗ್ರಾಂ ತೂಕದ ಬೆಳ್ಳಿಯ ತ್ರಿಶೂಲ, ಬೆಳ್ಳಿಯ ಸೊಂಟದ ಪಟ್ಟಿ ಬಂಗಾರದ ತಾಳಿ, ತಾಮ್ರದ ಶೆಡ್ಡಪ್ಪ, 13 ಪಂಚಲೋಹದ ವಿಗ್ರಹಗಳು ಟೇಬಲ್ ಡ್ರಾ ದಲ್ಲಿಟ್ಟಿದ್ದ ನಗದು 52,000 /- ರೂ ಕಳುವಾಗಿದೆ.
ಮತ್ತು ದೇವಿಯ ಮೂತರ್ ಮುಖದ ಮೇಲೆ ಗೀಚಿ ಡ್ಯಾಮೇಜ್ ಮಾಡಿದ್ದಾರೆ. ದೇವಸ್ಥಾನದ ಅಧ್ಯಕ್ಷ ರಮೇಶ್ ಅವರ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇದ್ದುದ್ದರಿಂದ ಊಟದ ವ್ಯವಸ್ಥೆ ಶ್ರೀ ಕಾಳಿಕಾ ಪರಮೇಶ್ವರಿ ದೇವಾಸ್ಥಾನದ ಮೇಲ್ಬಾಗದ ಹಾಲ್ ನಲ್ಲಿ ಇಟ್ಟುಕೊಂಡಿದ್ದರು. ಏ.27 ರಾತ್ರಿ 11-30 ಏ28 ರ ಬೆಳಿಗ್ಗೆ,, 07-00 ಗಂಟೆಯ ಮದ್ಯಾವಧಿಯಲ್ಲಿ ನಡೆದಿರ ಬಹುದು ಎಂದು ಅಂದಾಜಿಸಲಾಗಿದೆ.
ಬೆಳ್ಳಿಯ, ಬಂಗಾರದ, ಪಂಚಲೋಹದ ಸಾಮಾಗ್ರಿಗಳನ್ನು ಹಾಗೂ ನಗದು ಹಣ ಸೇರಿ ಒಟ್ಟು 1.97.300 /- ರೂ ಬೆಳೆ ಬಾಳುವ ವಸ್ತುಗಳನ್ನು ಕಳ್ಳತನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/13853