ಕೇಂದ್ರ ಕಾರಾಗೃಹದಲ್ಲಿದ್ದ ಶಿಕ್ಷಾಬಂಧಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಪೊಲೀಸರು ಶಿವಮೊಗ್ಗದ ಜೈಲ್ ನಲ್ಲಿ ಗಾಂಜಾ, ಮೊಬೈಲ್ ಆಯುಧ ಮೊದಲಾದ ನಿಷೇಧ ವಸ್ತುಗಳು ಬಳಕೆಯಾಗುತ್ತಿರುವ ಬಗ್ಗೆ ದಾಳಿ ನಡೆಸಿದಾಗಲೆಲ್ಲ ಯಾವ ವಸ್ತುಗಳು ಪತ್ತೆಯಾಗುತ್ತಿರಲಿಲ್ಲ. ಆದರೆ ಜೈಲು ಶಿಕ್ಷಾ ಬಂಧಿಯೊಬ್ಬ ನಿಷೇಧಿತ ಮೊಬೈಲ್ ನ್ನೇ ನುಂಗಿ ವಿಷಕಂಠನಾಗಲು ಹೊರಟವನನ್ನ ಆಪರೇಷನ್ ಮೂಲಕ ಉಳಿಸಿರುವ ಘಟನೆ ನಡೆದಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಪರಶುರಾಮ @ ಪರ್ಸ @ ಚಿಂಗಾರಿ ಮಾ.28 ರಂದು ಹೊಟ್ಟೆನೋವು ಎಂದು ಕೂಗತೊಡಗಿದ್ದಾನೆ. ಕರ್ತವ್ಯ ನಿರತ ಅಧಿಕಾರಿ / ಸಿಬ್ಬಂದಿಗಳು ತಿಳಿಸಿದ ತಕ್ಷಣ ಆತನಿಗೆ ಕಾರಾಗೃಹದ ಒಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಅದರೆ ಚಿಂಗಾರಿಗೆ ತನಗೆ ಹೊಟ್ಟೆನೋವು ಜಾಸ್ತಿ ಇರುವುದಾಗಿ ತಿಳಿಸಿದ ಕಾರಣ ಅದೇ ದಿನ ರಾತ್ರಿ ಮೆಗ್ರಾನ್ ಬೋಧನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆಸ್ಪತ್ರೆಯ ವೈದ್ಯಾಧಿಕಾರಿಗಳು ಚಿಂಗಾರಿಯ ಹೊಟ್ಟೆ ನೋವಿಗೆ ಆತ ಕಲ್ಲು ನುಂಗಿರುವುದೇ ಕಾರಣ ಎಂದು ತಿಳಿಸಿರುತ್ತಾರೆ.‌ “Consumption of foreign body (stone)” ನುಂಗಿರುವುದಾಗಿ ತಮ್ಮ ವರದಿಯಲ್ಲಿ ವೈದ್ಯರು ನೀಡಿದ ಕಾರಣ ಸೂಕ್ತ ಚಿಕಿತ್ಸೆಯನ್ನು ನೀಡಲು ತೀರ್ಮಾನಿಸಲಾಗಿರುತ್ತದೆ.

ಅದರಂತೆ ಚಿಂಗಾರಿಯನ್ನ ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ಏ. 01 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ Higher Centre ಗೆ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.‌ ಮೆಗ್ಗಾನ್ ನಿಂದ ಬೆಂಗಳೂರಿಗೆ ಕಳುಹಿಸಲಾಗಿದೆ. ಏ.03 ರಂದು ಕೇಂದ್ರ ಕಾರಾಗೃಹ ಬೆಂಗಳೂರು ರವರು ಖೈದಿಗೆ ಹಿರಿಯ ಮುಖ್ಯ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿ, ಅವರ ಶಿಫಾರಸ್ಸಿನಂತೆ ಏ.6 ರಂದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಿರುತ್ತಾರೆ.

ಎಲ್ಲಾವೂ ಭದ್ರತಾ ಅಡಿಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ದಿನಾಂಕ: 25-04-2024 ರಂದು ಸದರಿ ಬಂದಿಯ ಹೊಟ್ಟೆಯಿಂದ 01 ಮೊಬೈಲ್ ಫೋನನ್ನು ಹೊರ ತೆಗೆದಿದ್ದಾರೆ. ಹೊಟ್ಟೆಯಲ್ಲಿ ನಿಷೇಧಿತ ವಸ್ತುವಾದ ಮೊಬೈಲ್ ದೊರೆತಿರುವುದರಿಂದ ಈತನ ವಿರುದ್ಧ ತುಂಗ ನಗರದಲ್ಲಿ ದೂರು‌ದಾಖಲಿಸಿದ್ದಾರೆ.

ಪೇಸ್ಟ್ ನಲ್ಲಿ ಗಾಂಜಾ, ಗುದದ್ವಾರದಲ್ಲಿ ಗಾಂಜಾವನ್ನ ಜೈಲಿನಲ್ಲಿ ಸಾಗಿಸಲು ಯತ್ನಿಸಲಾಗಿತ್ತು. ಜೈಲಿನ ಬಂಧಿಗಳಿಗೆ ಚಾಕುಚೂರಿ ಸಾಗಿಸುವ ಯತದನ ನಡೆದಿತ್ತು. ಜೈಲಿನಲ್ಲಿ ಕೈಗಾರಿಕಾ ಭದ್ರತಾ ಪಡೆಯನ್ನ‌ ನಿಯೋಜಿಸಿರುವುದರಿಂದ ಈ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿದೆ. ಶಿಕ್ಷಾಬಂಧಿ ಚಿಂಗಾರಿ ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದಾನೆ.

ಇದನ್ನೂ ಓದಿ-https://suddilive.in/archives/13909

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close