ಸಚಿವ ಮಧು ಬಂಗಾರಪ್ಪ ರೀಚಾರ್ಜ್ ಎಂದಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಪೆಸಿಟ್ ಕಾಲೇಜಿನಲ್ಲಿ ಬಿಜೆಪಿ ಕರ್ನಾಟಕ ವೃತ್ತಿಪರ ಸಭೆ ಕಾರ್ಯಕ್ರಮದಲ್ಲಿ ಸಹೋದರ ಕುಮಾರ್ ಬಂಗಾರಪ್ಪನವರ ಭಾಷಣಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದ ಶಿಕ್ಷಣ ಸಚಿವರು ನಾಳೆಯ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಸದ್ದಿಗೋಷ್ಠಿಗೆ ಆಗಮಿಸಿದಾಗ ಸಿನಿಮಾ ಶೂಟಿಂಗ್ ಇದೆಯಾ ಸಾರ್ ಎಂದು ಸಚಿವರಿಗೆ ಕೇಳಿದರು.

ಶೂಟಿಂಗ್ ಇದೆ, ಸಿನಿಮಾ ಹೆಸರು ‘ರೀಚಾರ್ಜ್‘ ಎಂದು ಇಡಲಾಗಿದೆ. ಸಹೋದರ ಕುಮಾರ್ ಬಂಗಾರಪ್ಪನವರ ಹೆಸರು ಹೇಳದೆ, ರೀಚಾರ್ಜ್ ಆಗಿ ಒಬ್ವರು ಬಂದಿದ್ದಾರೆ. ಅದರ ವ್ಯಾಲಿಡಿಟಿ 6 ದಿನ ಮಾತ್ರ ಎಂದು ಹೇಳಿರುವುದು ಗಮನಸೆಳೆದಿದೆ.

ನಿನ್ನೆ ಪೆಸಿಟ್ ಕಾಲೇಜಿನಲ್ಲಿ ಸಹೋದರ ಮತ್ತು ಸಚಿವರ ಹೆಸರು ಪ್ರಸ್ತಾಪಿಸದೆ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಪ್ರಾಥಮಿಕ ಶಿಕ್ಷಣ ಬೇಕಿದೆ ಎಂದು, ಕಾಂಗ್ರೆಸ್ ಅಭ್ಯರ್ಥಿ ಗೀತರವರು ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧೆಗೂ ಯೋಗ್ಯರಲ್ಲ ಎಂಬ ಮಾತು ಮಧುರವರ ಟಾಂಗ್ ಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.

ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವರು ನಾಳೆ 12 ಟೆಗೆ ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರ್ತಾ ಇದ್ದಾರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ‌ ಡಿಕೆಶಿ ಪಾಲ್ಗೊಳ್ಳಲಿದ್ದಾರೆ. ವೇಣುಗೋಪಾಲ್ ಸು್ಜೇವಾಲ, ಜಯಕುಮಾರ್ ಸಹ ಪಾಲ್ಗೊಳ್ಳಲಿದ್ದಾರೆ.

ಎರಡುಗಂಟೆ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ನಟ ಸಹ ಭಾಗಿಯಾಗಲಿದ್ದಾರೆ. ನಾಳೆ ಒಂದು ಲಕ್ಷ ಜನ ಸೇರಲಿದ್ದಾರೆ ಹೊನ್ನಾಳಿ ಮತ್ತು ಚನ್ನಗಿರಿಯಿಂದ ಜನ ಸೇರಲಿದ್ದಾರೆ. ನಟ ಶಿವಣ್ಣ ಸಹ ಭಾಗಿಯಾಗಲಿದ್ದಾರೆ. ಯಾವುದೇ ರೋಡ್ ಶೋ ಇರಲ್ಲ. ಮೇ.4 ಪಕ್ಷದಿಂದ ರೋಡ್ ಶೋ ಇರಲಿದೆ ಎಂದರು.

ನಾಳೆ ಸೊರಬ ಕ್ಷೇತ್ರದಲ್ಲಿ ಪ್ರಚಾರ ನಡೆಯಲಿದೆ. ಕೊನೆಯ ದಿನ ಶಿಕಾರಿಪುರ, ಶಿರಾಳಕೊಪ್ಪ, ಸೊರಬದಲ್ಲಿ ರೋಡ್ ಶೋ ನಡೆಯಲಿದೆ ಎಂದ ಸಚಿವರು ರೀಚಾರ್ಜ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು ದುಡ್ಡುಕೊಟ್ಟು ರೀಚಾರ್ಜ್ ಆಗಿದ್ದಾರೆ. ಕೊಚ್ಚೆಗೆ ಕಲ್ಲು ಹೊಡೆಯುವ ಅಭ್ಯಾಸ ಇಲ್ಲ ಎಂದರು.

ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ಮಾತನಾಡಿ, ಅಮೇಠಿ ಯಿಂದ ರಾಹುಲ್ ಗಾಂಧಿ ಮತ್ತು ರಾಯ್ ಬರೇಲಿಯಲ್ಲಿ ಪ್ರಿಯಾಂಕ ವಾದ್ರ ಸ್ಪರ್ಧಿಸುತ್ತಿರುವುದಾಗಿ ಪಕ್ಷ ತೀರ್ಮಾನಿಸಿರುವುದಾಗಿ ಪ್ರಕಟಿಸಿದರು.

ಇದನ್ನೂ ಓದಿ-https://suddilive.in/archives/13913

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket