ಸಿಡಲಿಗೆ ಕೈಕಾಲುಕಳೆದುಕೊಂಡಿದ್ದ ರುದ್ರೇಶ್ ನಿಧಾನವಾಗಿ ಗುಣಮುಖ

ಸುದ್ದಿಲೈವ್/ಶಿವಮೊಗ್ಗ

ಏ.19 ರಂದು ಅಬ್ಬರಿಸಿದ ಮಳೆಯ ವೇಳೆ ಸಿಡಿದ ಸಿಡಿಲು ಓರ್ವನ ಬಲಿಪಡೆದಿತ್ತು. ಮತ್ತೋರ್ವನ ಕೈಕಾಲು ಸ್ವಾದೀನ ಕಳೆದಿತ್ತು. ಆದರೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆದ ಪರಿಣಾಮ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎಸ್! ಏ19 ರಂದು ಹರಮಘಟ್ಟದಲ್ಲಿ ಸುರಿದ ಮಳೆ ಗುಡುಗು ಮತ್ತು ಸಿಡಿಲೊಂದಿಗೆ ಅಬ್ಬರಿಸಿತ್ತು‌ ಜಮೀನಿನಲ್ಲಿದ್ದ ರಾಕೇಶ್ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಜೊತೆಯಲ್ಲಿದ್ದ ರುದ್ರೇಶ್ ಗೆ ಕೈಕಲು ಸ್ವಾಧೀನ ಕಳೆದುಕೊಂಡಿದ್ದರು.

ಕೈಕಾಲು ಸ್ವಾಧೀನ ಕಳೆದುಕೊಂಡಿದ್ದ ರುದ್ರಶ್ ನನ್ನ ನೋಡಿದ ಗ್ರಾಮಸ್ಥರಾದ ಓಂಕಾರಪ್ಪ ಮೆಗ್ಗಾನ್ ಗೆ ದಾಖಲಿಸಿದ್ದರು. ಸಕಾಲದಲ್ಲಿ ಚಿಕಿತ್ಸೆ ನೀಡಿ ರೋಗಿ ಗುಣಮುಖರಾಗಲು ಕಾರಣರಾದ ವೈದ್ಯಕೀಯ, ಅರೆವೈದ್ಯಕೀಯ, ನರ್ಸಿಂಗ್ ಸಿಬ್ಬಂದಿಗಳಿಗೆ ಡಾ॥ ವಿರುಪಾಕ್ಷಪ್ಪ ಮಾನ್ಯ ನಿರ್ದೇಶಕರು, ಶಿವಮೊಗ್ಗ

ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಡಾ॥ ಟಿ.ಡಿ. ತಿಮ್ಮಪ್ಪ, ವೈದ್ಯಕೀಯ ಅಧೀಕ್ಷಕರು, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಡಾ॥ ಸಿದ್ದನಗೌಡ ಪಾಟೀಲ್, ಜಿಲ್ಲಾ ಶಸ್ತ್ರಚಿತ್ಸಕರು, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಇವರ ಮಾರ್ಗದರ್ಶನದಲ್ಲಿ ರೋಗಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಸಾರ್ವಜನಿಕರು ಇಂತಹ ಸಮಾಜಮುಖಿ ಕರ್ತವ್ಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅಧೀಕ್ಷಕ ಡಾ.ತಿಮ್ಮಪ್ಪ ಕೈ ಕಾಲಿನ ಸ್ವಾಧೀನ ಕಳೆದುಕೊಂಡಿರುವ ರುದ್ರೇಶ್ ಗೆ ನಿಧಾನವಾಗಿ ಸ್ವಾಧೀನ ಬರ್ತಾ ಇದೆ. ಶೀಘ್ರದಲ್ಲಿಯೇ ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/13645

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket