ಕಸ ಹಾಕಲು ತೆರಳಿದ್ದ ವೃದ್ಧೆ ಶವವಾಗಿ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಕಸಹಾಕಲು ಹೋಗಿದ್ದ ವೃದ್ಧೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಭದ್ರಾವತಿಯ ಶ್ರೀರಾಮ ನಗರದ ನಿವಾಸಿ ರಾಮೇಗೌಡರ ಪತ್ನಿ ಪದ್ಮ @ ಪದ್ಮಮ್ಮ(53), ಇಬ್ಬರು ಕೂಲಿ ಕೆಲಸ ಮಾಡಿಕೊಂಡು  ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ನಿನ್ನೆ ಬೆಳಗ್ಗಿನ ಜಾವ ಸುಮಾರು 5.30 ಗಂಟೆಗೆ ಪದ್ಮ  ಎದ್ದು ಮನೆ ಕಸ ಗುಡಿಸಿ,  ಕಸ ಮತ್ತು ಕೋಳಿ ಕಸವನ್ನು ಬಿಸಾಕಿ ಬರಲು ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಚಾನಲ್ ಹತ್ತಿರ ಹೋಗಿದ್ದಾರೆ.‌

ನಂತರ ಸುಮಾರು ಬೆಳಿಗ್ಗೆ 06.00 ಗಂಟೆಗೆ  ಪದ್ಮರರವರ ಪಕ್ಕದ ಮಬೆಯವರು ಬಂದು ರಾಮೇಗೌಡರನ್ನ  ಜೆ.ಕೆ ಇಂಡಸ್ಟ್ರೀಸ್ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಜೆ.ಕೆ ಇಂಡಸ್ಟ್ರಿಟೀಸ್ ಮುಂದೆ ಇರುವ ಭದ್ರಾವತಿ-ಚನ್ನಗಿರಿ ರಾಜ್ಯ ಹೆದ್ದಾರಿ ಟಾರ್ ರಸ್ತೆಯ ಮೇಲೆ ಪದ್ಮರವರ ಮೃತ ದೇಹ ಪತ್ತೆಯಾಗಿದ್ದಾರೆ.

ಬೆಳಗಿನ ಜಾವ ಸುಮಾರು 05.50 ಗಂಟೆಗೆ ಕಸ ಬಿಸಾಕಲು ತೆರಳಿದ್ದ ವೃದ್ಧೆ ಪದ್ಮರಿಗೆ  ಜೆ.ಕೆ ಇಂಡಸ್ಟ್ರೀಸ್ ಮುಂದೆ ಇರುವ ಭದ್ರಾವತಿ-ಚೆನ್ನಗಿರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಭದ್ರಾವತಿ ಕಡೆಯಿಂದ ಬಂದ ಕಾರು ಗುದ್ದಿದೆ.‌

ಗುದ್ದಿದ ಕಾರು ಪದ್ಮರವರ ಜೀವ ತೆಗೆದಿದೆ. ಚಾಲಕ ನಿಲ್ಲಸದೆ ಪರಾರಿಯಾಗಿದ್ದಾನೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ಇದನ್ನೂ ಓದಿ-https://suddilive.in/archives/13845

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close