ಸುದ್ದಿಲೈವ್/ಶಿವಮೊಗ್ಗ
ರಾಜ್ಯದ ಮೊದಲ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಮತದಾನಕ್ಕೆ ಬಾಕಿ ಇರುವ 14 ಲೋಕಸಭಾ ಕ್ಷೇತ್ರದಲ್ಲಿ ಮೇ.07 ರಂದು ಮತದಾನ ನಡೆಯಲಿದೆ.
ಮೇ 07ರ ಮತದಾನಕ್ಕೆ ಶಿವಮೊಗ್ಗ ಸಜ್ಜಾಗಿದ್ದು ನಾಳೆ ಘಟಾನುಗಟಿಗಳು ನಗರಕ್ಕೆ ಆಗಮಿಸುತ್ತಿದ್ದಾರೆ. ಒಂದು ಕಡೆ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ನಗರಕ್ಕೆ ಆಗಮಿಸುತ್ತಿದ್ದಾರೆ.
ನಾಳೆ ಬೆಳಿಗ್ಗೆ 9 ಗಂಟೆಗೆ ಸುದ್ದಿಗೋಷ್ಠಿ ನಡೆಸುವ ಮಾಜಿ ಮುಖ್ಯಮಂತ್ರಿಗಳು ನೆಹರೂ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಈ ವೇಳೆ ಸಂಸದ ರಾಘವೇಂದ್ರ, ಭದ್ರಾವತಿಯ ಶಾರದಾ ಅಪ್ಪಾಜಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ಶಾಸಕಿ ಶಾರದಾ ಪೂರ್ಯನಾಯ್ಕ್ ಮೊದಲಾದವರು ಭಾಗಿಯಾಗಲಿದ್ದಾರೆ.
ಅದರಂತೆ ಸಚಿವ ಸಂತೋಷ್ ಲಾಡ್ ಸಹ ನಾಳೆ ಆಗಮಿಸುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪನವರ ಮನೆಯಲ್ಲಿ ಪತ್ರಿಕಾಗೋಷ್ಠಿಯನ್ನ ಹಮ್ಮಿಕೊಂಡಿದ್ದಾರೆ. ಅದರಂತೆ ನಾಳೆ ಮಧ್ಯಾಹ್ನ ಸಿನಿಮಾ ತಾರೆಯರ ರೋಡ್ ಶೋ ನಡೆಲಿದೆ. ಮೇ.02 ರಂದು ರಾಹುಲ್ ಗಾಂಧಿ ನಗರಕ್ಕೆ ಆಗಮಿಸುತ್ತಿದ್ದ ಗೀತ ಶಿವರಾಜ್ ಕುಮಾರ್ ಪರ ಮತಯಾಚಿಸಲಿದ್ದಾರೆ. ಒಟ್ಟಿನಲ್ಲಿ ಮುಂದಿನ ಒಂದುವಾರ ಅಖಾಡ ರಂಗೇರಲಿದೆ
ಇದನ್ನೂ ಓದಿ-https://suddilive.in/archives/13774