ಸುದ್ದಿಲೈವ್/ಸೊರಬ
ಗೀತಾ ಶಿವರಾಜಕುಮಾರ್ ಅವರನ್ನು ಬಂಗಾರಪ್ಪ ಪುತ್ರಿ, ಡಾ.ರಾಜಕುಮಾರ್ ಸೊಸೆ ಹಾಗೂ ಶಿವರಾಜಕುಮಾರ್ ಪತ್ನಿ ಎಂದು ಕ್ಷೇತ್ರದ ಜನ ಅಭಿಮಾನ ನೀಡುತ್ತಾರೆಯೇ ಹೊರತು ಮತ ನೀಡಲ್ಲ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರಿಂದ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಕಂಡಿದೆ. ಆದರೆ, ಗೀತಾ ಶಿವರಾಜಕುಮಾರ್ ಅವರು ಅವರz್ದೆÃ ಪಕ್ಷದ ನಾಲ್ಕು ಅಧ್ಯಕ್ಷರ ಹೆಸರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಬಂಗಾರಪ್ಪ ಅವರ ಪುತ್ರಿ, ಡಾ.ರಾಜಕುಮಾರ್ ಸೊಸೆ ಹಾಗೂ ಶಿವರಾಜಕುಮಾರ್ ಅವರ ಪತ್ನಿ ಎಂದು ಅವರಿಗೆ ಜನರು ಅಭಿಮಾನ ನೀಡುತ್ತಾರೆ. ಆದರೆ, ಮತ ನೀಡಲ್ಲ. ಕಾರಣ, ಜನರು ಅಭಿಮಾನಕ್ಕೆ ಮತ ನೀಡಲ್ಲ, ಅಭಿವೃದ್ಧಿಗೆ ಬೆಂಬಲಿಸುತ್ತಾರೆ ಎಂದರು.
ರಾಜಕುಮಾರ್ ಕುಟುಂಬಸ್ಥರ ಸಮ್ಮತಿ ಇಲ್ಲದೇ ಇದ್ದರೂ, ರಾಜಕಾರಣಕ್ಕೆ ಬಂದಿದ್ದಾರೆ. ಜಾತಿ, ಊರು ಹಾಗೂ ನಾಯಕರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಜಾತಿ ಮೇಲಿನ ಅಭಿಮಾನ ಬೇಡ. ಬದಲಾಗಿ ಕ್ಷೇತ್ರ ಹಾಗೂ ದೇಶದ ಅಭಿವೃದ್ಧಿ ಮತ ನೀಡುವ ನಿಮ್ಮ ಆದ್ಯತೆಯಾಗಲಿ ಎಂದರು.
ರಾಜಕಾರಣದ ಯಾವುದೇ ಅನುಭವ ಇಲ್ಲದ ಗೀತಾ ಶಿವರಾಜಕುಮಾರ್ ಅವರು ಅವರ ಪಕ್ಷದ ನಾಲ್ಕು ಅಧ್ಯಕ್ಷರ ಹೆಸರು ಹೇಳೋಣ ನೋಡೋಣ ಎಂದು ಸವಾಲು ಹಾಕಿದರು.
ಇಂತಹವರಿಂದ ಮಲೆನಾಡಿನ ಜನರ ಸಮಸ್ಯೆಗಳು ಹೇಗೆ ಅರ್ಥವಾಗುತ್ತವೆ? ಅದನ್ನು ಹೇಗೆ ಪ್ರತಿನಿಧಿಸಿ, ಪರಿಹರಿಸುತ್ತಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ರಾಘಣ್ಣ ಎನ್ನುತ್ತೇವೆ
ಮೂರು ಬಾರಿ ಸಂಸದರಾಗಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ರಾಘಣ್ಣ ಅವರು ಈ ಭಾರಿ ಗೆದ್ದ ನಂತರ ಎಂಪಿ ರಾಘಣ್ಣ ಎನ್ನಲ್ಲ. ಬದಲಾಗಿ, ಈ ಬಾರಿ ಗೆದ್ದು ಕೇಂದ್ರ ಸಚಿವರಾಗುತ್ತಾರೆ. ಹೀಗಾಗಿ, ಅವರನ್ನು ಕೇಂದ್ರ ಸಚಿವ ರಾಘಣ್ಣ ಎಂದು ಕರೆಯುತ್ತೇವೆ ಎಂದರು.
ಪ್ರಕಾಶ್ ತಲಕಲಕೊಪ್ಪ, ಹರತಾಳು ಹಾಲಪ್ಪ, ವಿ ಜಿ ಪರಶುರಾಮ್, ಡಾ|| ಜ್ಞಾನೇಶ್, ರಾಜು ಮಾವಿನ ಬಳ್ಳಿ ಕೊಪ್ಪ ಹೊಳಿಯಮ್ಮ, , ಸಂಜಯ್ ಗೌಡ, ಹರೀಶ್, ಜನಕಪ್ಪ, ಅಭಿಷೇಕ್, ರಮೇಶ್ ಹಸವಿ,ಪ್ರಸನ್ನ ಶೇಟ್,ಸೇರಿದಂತೆ ಮೊದಲಾದವರಿದ್ದರು.
ವರದಿ ಮಧು ರಾಮ್ ಸೊರಬ