ಪ್ರಧಾನಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು-ಡಿಸೋಜಾ

ಸುದ್ದಿಲೈವ್/ಶಿವಮೊಗ್ಗ

ದೇಶಕ್ಕೆ ತೃತೀಯ ರಾಜ್ಯದ ಎರಡನೇ ಹಂತದ ಚುನಾವಣೆಗೆ  ಪ್ರಚಾರ ನಡೆಯುತ್ತಿದೆ. INDIA ಒಕ್ಕೂಟ ಅಭ್ಯರ್ಥಿಗೆ ದೇಶದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ ಎಂದು
ಕೆಪಿಸಿಸಿಯ ಮುಖ್ಯ ವಕ್ತಾರ ಐವಾನ್ ಡಿಸೋಜ ಅಭಿಪ್ರಾಯಪಟ್ಟರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರ, ಪ್ರಧಾನಿ ಅವರ ಭಾಷಣದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಸುಳ್ಳುಗಳನ್ನ ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಮೋದಿ ಅವರ ಭಾಷಣವನ್ನ ಬಹಳವರ್ಷದಿಂದ ಗಮನಿಸುತ್ತಿದ್ದೆ. ಪ್ರಧಾನಿ ವಿಚಲಿತರಾದಂತೆ ಕಂಡಿದ್ದಾರೆ.

ಕಾಂಗ್ರೆಸ್ ಬಹುಸಂಖ್ಯಾತರನ್ನ ಕಸಿದುಕೊಂಡು ಅಲ್ಪಸಂಖ್ಯಾತರಿಗೆ ಕೊಡುತ್ತಿದ್ದಾರೆ ಎಂದು ಪ್ರಧಾನಿ ಹೇಳ್ತಾ ಇದ್ದಾರೆ. ದೇಶದ ಆಸ್ತಿಯನ್ನೂ ಸಹ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಪ್ರನಾಳಿಕೆಯಲ್ಲಿ ಇಲ್ಲದಿದ್ದಿರೂ ಹೀಗೆ ಹೇಳಬಹುದೇ ಎಂದು ಡಿಸೋಜಾ ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋಲಿನ ಭಯದಿಂದ ಪ್ರಧಾನಿ ಮಾತಾಡಿದ್ದಾರೆ. ರಾಜ್ಯದಲ್ಲಿ ಮುಸ್ಲೀಂರಿಗೆ 4% ಮೀಸಲಾತಿ ನೀಡಲಾಗಿತ್ತು. ಬಿಜೆಪಿ ರಾಜ್ಯದಲ್ಲಿತ್ತು.‌ಬದಲಾಯಿಸಲಾಗಿಲ್ಲ. ಬೊಮ್ಮಾಯೊ ಸರ್ಕಾರ ಕೊನೆ ಹಂತದಲ್ಲಿ ಮುಸ್ಲೀಂ ಸಮುದಾಯದ 4% ಮೀಸಲಾತಿ ತೆಗೆದು ಬೇರೆ ಸಮುದಾಯಕ್ಕೆ ನೀಡಿತು.

ನ್ಯಾಯಾಲಯಕ್ಜೆ ಹೋದರು.‌ ನ್ಯಾಯಾಲಯವು ಈ ಮೀಸಲಾತಿಯನ್ನ ಪುರಸ್ಕರಿಸಿಲ್ಲ. ಇಷ್ಟಾದರೂ ಪ್ರಧಾನಿಯವರು ಕಾಂಗ್ರೆಸ್ ಮುಸ್ಲೀಂರಿಗೆ ಈ ದೇಶದ ಆಸ್ತಿ ನೀಡಲು ಮುಂದಾಗಿರುವುದು ಎಷ್ಟು ಸರಿ ಎಂದು ದೂರಿದರು. ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ ನಡೆದ 14 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದರು.

ಗ್ಯಾರೆಂಟಿಗಳು ರಾಜ್ಯದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಬಲ ತಂದು ಕೊಡಲಿದೆ. ಶಿವಮೊಗ್ಗದಲ್ಲಿ ಮತದಾರರನ್ನ‌ಭೇಟಿಯಾಗಿದ್ದೇನೆ ಗೀತ ಶಿವರಾಜ್ ಕುಮಾರ್ ಗೆ ಹೆಚ್ಚಿನ ಒಲವಿದೆ. ಗೆಲ್ಲಲಿದ್ದಾರೆ. 20 ಸ್ಥಾನವನ್ನ ಪಕ್ಷ ಗೆದ್ದು ಬೀಗಲಿದೆ. ದೇಶದಲ್ಲಿ ಮೋದಿ ಅಲೆ ಇಲ್ಲ ಎಂದರು‌.

ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ವಿಡಿಯೋಗಳು ವೈರಲ್ ಕುರಿತು SIT ಗೆ ನೀಡಲಾಗಿದೆ. ಅವರು ವಿದೇಶಕ್ಕೆ ಹೋಗಿರುವ ಮಾಹಿತಿ ಇದೆ ಅಪರಾಧ ಸಾಬೀತಾದರೆ ಅವರನ್ನ ಬಂಧಿಸುವ ಕ್ರಮ ಕೈಗೊಳ್ಳಲು ಕಾನೂನಿಗೆ ಅಧಿಕಾರವಿದೆ ಎಂದರು.‌

ಬರ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದ ಬಿಜೆಪಿ ಪಕ್ಷದಲ್ಲಿ ಅಶೋಕ್ ಮತ್ತು ಬೊಮ್ಮಾಯಿ‌ಅವರು ಆ ಪಕ್ಷದಲ್ಕಿ ಹೇಗೆ ಇದ್ದೀರಿ ಏಂದು ಪ್ರಶ್ನಿಸಿದರು.

ಇದನ್ನೂ ಓದಿ-https://suddilive.in/archives/13757

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close