ಗೀತ ಶಿವರಾಜ್ ಕುಮಾರ್ ಪರ ಪ್ರಚಾರಕ್ಕೆ ಶಿವಮೊಗ್ಗಕ್ಕೆ ಯಾರು ಯಾರು ಆಗಮಿಸಲಿದ್ದಾರೆ?

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೇ 2ರಂದು ಜಿಲ್ಲೆಗೆ ಬರಲಿದ್ದಾರೆ. ಮೋಸ್ಟ್ ವಾಂಟೆಡ್ ಲೀಡರ್ ಆಗಿದ್ದಾರೆ. ಭಾರತ್ ಜೋಡೋ ಯಾತ್ರ ಬಳಿಕ ಅವರ ಇಮೇಜ್ ಜಾಸ್ತಿ ಆಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೀತ ಶಿವರಾಜ್ ಕುಮಾರ್ ಪರ ರಾಹುಲ್ ಗಾಂಧಿ ಪ್ರಚಾರಕ್ಕೆ ಬರುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಫ್ರೀಡಂ ಪಾಕ್೯ನಲ್ಲಿ ಸಮಾವೇಶ ನಡೆಯಲಿದೆ. 12ರಿಂದ ಮಧ್ಯಾಹ್ನ 1.30ರ ವೆಗೆ ಸಮಾವೇಶ ನಡೆಯಲಿದೆ. ಸಿಎಂ, ಡಿಸಿಎಂ ಬರಲಿದ್ದಾರೆ ಎಂದರು.

ಸಿನೆಮಾ ರಂಗದಿಂದ ಹಲವರು ಪ್ರಚಾರ ಮಾಡಲಿದ್ದಾರೆ. ಏ. 29ರಿಂದ ಎರಡು ದಿನ ಅವರೇ ವಯುಕ್ತಿಕ ಪ್ರಚಾರ ಮಾಡಲಿದ್ದಾರೆ. ಸಾಕಷ್ಟು ಸಂಘಟನೆಗಳು ಬರುವರು. ಸಿನೆಮಾ ಸ್ಟಾರ್ ಗಳಿಗೆ ನಾವೇ ಪ್ರಚಾರಕ್ಕೆ ಬಾರದಂತೆ ಮನವಿ ಮಾಡಿದ್ದೇವು.  ಆದರೆ ಅವರೇ ಆಸಕ್ತಿ ವಹಿಸಿ ಬರುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಗೀತಾ ಪರ ಸಿನೆಮಾ‌ ಸ್ಟಾರ್ ಗಳು ಎಂಟ್ರಿ……

ದುನಿಯಾ ವಿಜಿ, ಡಾಲಿ ಧನಂಜಯ್, ದ್ರುವಸರ್ಜಾ, ವಿಜಯರಾಘವೇಂದ್ರ, ನೆನಪಿರಲಿ ಪ್ರೇಮ್, ಚಿಕ್ಕಣ್ಣ, ಅನುಶ್ರೀ, ನಿಶ್ಚಿಕಾನಾಯ್ಡು, ಚಂದನ್ ಶೆಟ್ಟಿ, ಅತುಲ್ ಬರುತ್ತಿದ್ದಾರೆ. ಗೀತ ಶಿವರಾಜ್ ಕುಮಾರ್ ಪರ ರೋಡ್ ಶೋ ಮಾಡಲಿದ್ದು. ಭದ್ರಾವತಿ, ಬೈಂದೂರಿನಲ್ಲಿ ರೋಡ್ ಶೋ ಪ್ಲಾನ್ ಮಾಡಿದ್ದೇವೆ. ಪ್ರಚಾರ ಚೆನ್ನಾಗಿ ನಡೆಯುತ್ತಿದೆ ಎಂದರು.

ನನ್ನ ಬೂತ್ ನನ್ನ ಜವಾಬ್ದಾರಿ ನಡೆಯುತ್ತಿದೆ.

ನನ್ನ ಬೂತ್ ನನ್ನ‌ ಜವಬ್ದಾರಿ  ಅಭಿಯಾನದ ಅಡಿ 4.50 ಲಕ್ಷ ಮನೆಗಳಿಗೆ ಹಂಚಿಕೆ ಮಾಡಿದ್ದೇವೆ. ಶಿವಮೊಗ್ಗ ಸಿಟಿಯಲ್ಲಿ ಇತಿಹಾಸ ಸೃಷ್ಟಿ ಆಗುತ್ತಿದೆ.‌ಬಹಳ ಚೆನ್ನಾಗಿ ರೆಸ್ಪಾನ್ಸ್ ಇದೆ. ಗೃಲಕ್ಷ್ಮಿ, ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಯ ಲಾಭವನ್ನ ಜನ ಪಡೆದಿದ್ದಾರೆ. ಸಿಟಿ ಜನರ ರೆಸ್ಪಾನ್ಸ್ ಭರ್ಜರಿಯಾಗಿ ದೊರೆಯುತ್ತಿದೆ.

ಟಾರ್ಗೆಟ್ ಇಟ್ಟಂತೆ ಫಿಕ್ಸ್

ನನಗೆ ವಿಶ್ವಾಸವಿದೆ. ಗೀತಾ ಅವರು ಭಾರಿ ಅಂತರದಿಂದ ಗೆಲ್ಲಲಿದ್ದಾರೆ. ಶೇ. 75ರಷ್ಟು ಗ್ರಾಪಂ ವ್ಯಾಪ್ತಿ ಕವರ್ ಆಗಿದೆ. ನಾವು ಟಾರ್ಗೆಟ್ ಇಟ್ಟಂತೆ ಆಗುತ್ತದೆ. ಕೋಟ್೯ ಆವರಣದಲ್ಲಿ ಪ್ರಚಾರ ಮಾಡಿದ್ದೇವೆ. ಕೈಗಾರಿಕೆ ಪ್ರದೇಶದಲ್ಲಿ ಪ್ರಚಾರ ಮಾಡಿದ್ದೇವೆ.ರಾಜ್ಯದಲ್ಲಿ ಭಾರಿ ರೆಸ್ಪಾನ್ಸ್ ಇದೆ.‌ಮತದಾರರ ಬಳಿ ಹೋದಾಗ ಅವರು ರಿವಸ್೯ ಹೊಡೆಯುತ್ತಿಲ್ಲ ಎಂದರು.

ಯಾರಿಗೆ ತೊಂದರೆ ಆಗದಂತೆ ಸ್ಯಾಮ್‌ ಪಿತ್ರೋಡ್ ಇರಲಿ ರಾಜ್ಯದ ಜನತೆಗೆ ಒಳ್ಳೆಯದು ಮಾಡಲಿದ್ದೇವೆ. ಬಿಜೆಪಿ ಗ್ಯಾರಂಟಿಹಯನ್ನ ಟೀಕೆ ಮಾಡಲಿ. ಶೇ. ೧೦ ರಷ್ಟು ಜನರಿಗೆ ಹೋಗಿಲ್ಲ ಅಂದ್ರೆ ಜನ ಜಾಡಿಸಿ‌ ಒದೆಯುತ್ತಿದ್ದರು‌‌. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ಲ.‌ಸಹಾಯ ಪಡೆದ ಜನ ನಮಗೆ ಋಣ ತೀರಿಸುವರು ಎಂದರು.

ತಮಿಳುನಾಡಿಗೆ ಓಡಿ ಹೋದ ಅಣ್ಣಾಮಲೈ……..

ಅಣ್ಣಾಮೈಲೈ ರಾಜ್ಯದ ಸಂಬಳ ಪಡೆದು ತಮಿಳು ನಾಡಿಗೆ ಓಡಿ ಹೋದರು. ಕರ್ನಾಟಕದಲ್ಲಿ ನಿಲ್ಲಬೇಕಿತ್ತು. ಅಣ್ಣಾಮಲೈ ಸೇರಿದಂತೆ ಯಾರು ಗೆಲ್ಲಲ್ಲ ಎಂದು ಸಚಿವ ಮಧು ಆಗ್ರಹಿಸಿದ್ದಾರೆ.

ತಾಳಿ ಮಾಂಗಲ್ಯ ಸೂತ್ರ ತರಬೇಕಿದೆ.‌ಇದು ಓಟಿಗಾಗಿ‌ ಗಿಮಿಕ್ ಇದು. ಮೋದಿ ಲೋ‌ಲೆವಲ್ ಮಾತನಾಡುವುದು ಸರಿಯಲ್ಲ. ಮೋದಿ ವಾಷಿಂಗ್‌ ಮಷಿನ್ ಭ್ರಷ್ಟಾಚಾರಿಗಳಿಗೆ ಅನುಕೂಲ. ಪೆಟ್ರೋಲ್, ಡಿಸೇಲ್ ಬಗ್ಗೆ ಮಾತನಾಡಲಿ.

ಸುಳ್ಳು ಹೇಳುವುದು ಬಿಜೆಪಿಗೆ ಕಾಯಕವಾಗಿದೆ. ರಾಜ್ಯಾಧ್ಯಕ್ಷ ಮತ್ತು ಸಂಸದರು ಅದೇ ಮಾತನಾಡುತ್ತಿದ್ದಾರೆ. ಬಿಎಸ್ ವೈ ಮನೆಯಲ್ಲಿನ ಕೆಲಸ ಮಾಡುವವರು ಗ್ಯಾರಂಟಿ ಫಲಾನುಭವಿಗಳು ಆಗಿದ್ದಾರೆ.

ಎಷ್ಟು ಜನ ಸೈನಿಕರು ಸತ್ರು ಹೇಳಿ…….

ಕಾಂಗ್ರೆಸ್ ‌ ಬಂದರೇ ರಾಷ್ಟ್ರೀಯ ಭದ್ರತಾ ಏನಾಗುತ್ತದೆ.‌ಮಣಿಪುರದಲ್ಲಿ ಏನಾಗಿದೆ, ಮೋದಿ‌ ಬಂದ ಮೇಲೆ ಸೈನಿಕರು ಎಷ್ಟು ಸತ್ತರು. ಚೈನಾ ಎಷ್ಟು ಭೂಮಿ ಕಬಳಿಸಿದೆ.

ಪಾಕ್ ಮತ್ತು ಬಾಂಗ್ಲಾಗೆ ಹೋಗಿ ಬಿಜೆಪಿಯವರು ಸ್ಪರ್ಧಿಸಲಿ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕ್ಕೆ ಹೋಗಿ ನಿಲ್ಲುವುದು ಸೂಕ್ತವಾಗಿದೆ. ದೇಶದಲ್ಲಿ ಬಿಜೆಪಿ ಅವರ ಸೋಲು ಪಕ್ಕಾ ಖಚಿತವಾಗಿದೆ. ಮೋದಿ ನೋಡಿ ಈ ಬಾರಿ ಜನ ಓಟ್ ಹಾಕುವುದಿಲ್ಲ.

ರಾಜ್ಯದ ಅಭವೃದ್ಧಿಗೆ ಕೇಂದ್ರದ ಸಹಕಾರ ಬೇಕು. ಶರಾವತಿ ಸಂತ್ರಸ್ತರ ಸಮಸ್ಯೆಗೆ ಬಿಜೆಪಿ ಕಾರಣವಾಗಿದೆ. ಬಿಜೆಪಿ ಸಾಧನೆ‌ ಹಪ್ಪಳ ಇದ್ದಂತೆ. ಜಿಲ್ಲೆಯಲ್ಲಿ ಹಾಕಿಸಿರುವ ರೋಡ್ ನಾಲ್ಕು ತಿಂಗಳಲ್ಲಿ‌ಕಿತ್ತು ಹೋಗುತ್ತದೆ. ಹೊಲಸು ರಾಜಕೀಯ ಮಾಡಿಕೊಂಡು ಬಿಜೆಪಿ ಓಡಾಡುತ್ತಿದೆ. ಭಾರತ್ ರೈಸ್ ಎಲ್ಲಿದೆ. ನಮಗೆ ಅಕ್ಕಿ ಕೊಡಲಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಡಿ.‌ಮಂಜುನಾಥ, ಚಂದ್ರಭೂಪಾಲ್, ಶೇಷಾದ್ರಿ, ಶಮಂತ್ ಇದ್ದರು.

ಇದನ್ನೂ ಓದಿ-https://suddilive.in/archives/13674

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket