ಮಹಿಳೆಯರ ಬಗ್ಗೆ ಉಗ್ರರಾಗಿ ಮಾತನಾಡುವವರು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಮಾನಹರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ-ಆಯನೂರು

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆಯ ಮತದಾನದ ದಿನಾಂಕ ಹತ್ತಿರ ಬರ್ತಾ ಇದೆ. ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಗೆಲ್ಲುವ ವಿಶ್ವಾಸ ಹೆಚ್ಚಿಸಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರುಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಆರೋಪಿ ಫೈಯಾಜ್ ಗೆ ಕಠಿಣ ಶಿಕ್ಷೆಯ ಕೂಗು ಹೆಚ್ಚಾಗಿದೆ. ನಮ್ಮ ಪಕ್ಷದ ನಿಲುವು ಅದೇ ಆಗಿದೆ.

ಹಾಸನದಲ್ಲಿ ಅದೇ ರೀತಿ ರಾಜಕಾರಣಿಯೊಬ್ಬರ ಮನೆಯಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ನಿರಂತರ ಆರೋಪ ಕೇಳಿ ಬಂದಿದೆ. ನೇಹಾ ಹತ್ಯೆಯನ್ನ ಖಂಡಿಸುವ ನಾವು ಮನೆಕೆಲಸಕ್ಕೆ ಬಂದ ಹೆಣ್ಣುಮಗಳು ಕೈ ಮುಗಿದು ಕೇಳಿದರೂ ಅತ್ಯಾಚಾರ ನಡೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದರು.

ಮಹಿಳೆಯ ಬಗ್ಗೆ ಉಗ್ರವಾಗಿ  ಮಾತನಾಡುವ ಬೇರೆಯವರು ಈ ಮಹಿಳೆಯ ಮೇಲೆ ಸರಣಿ ಅತ್ಯಾಚಾರ ನಡೆದಿರುವುದು ಯಾಕೆ ಮಾತನಾಡುತ್ತಿಲ್ಲ. ಒತ್ತಡ ಕಾರಣಕ್ಕೋಸ್ಕರ ಮಹಿಳಾಪೊಲೀಸ್ ಸಹ ಸ್ವ ಇಚ್ಚೆಯಿಂದಲೋ, ಒತ್ತಡಕ್ಕೆ ಮಣಿದು ‌ಬೆತ್ತಲಾಗಿರುವ ದೃಶ್ಯಗಳು ಕಂಡು ಬಂದಿದೆ. ಸೊಮೋಟೋ ಪ್ರಕರಣ ದಾಖಲಾಗುತ್ತಿಲ್ಲ ಎಂದು ದೂರಿದರು.

ಸ್ವಯಂ ಘೋಷಿತ ಹಿಂದೂ ವೀರರು, ಕುಂಕುಮ ಅಳಸಿಕೊಂಡಿದ್ದಕ್ಕೆ ಕ್ಷಮೆ ಕೇಳ ಬೇಕು ಎಂದು ಆಗ್ರಹಿಸುವವರು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮಾನ ಹರಾಜಾಗುತ್ತಿದೆ.  ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದವರಿಂದ  ಪತ್ನಿಯ ಹಣೆಯ ಮೇಲಿನ ಕುಂಕುಮ ಅಳಸಿಹೋಗಿದೆಯಲ್ಲಾ? ಉದ್ರೇಕಕಾರಿ ಚುನಾವಣೆ ನಡೆಸಲು ಬಯಸಿದ್ದಾರೆ. ಇದು ಖಂಡನೀಯ ಎಂದರು.

ನಾರಿಶಕ್ತಿಯ ಬಗ್ಗೆ ನಮಾತನಾಡುವ ಬಿಜೆಪಿ ಮೌನಕ್ಕೆ ಜಾರಿದ್ದೇಕೆ? ಮೈತ್ರಿ ಅಭ್ಯರ್ಥಿ ಅಂತಲೋ‌? ಕೂಲಿ ಕಾರ್ಮಿಕ ಮಹಿಳೆಯ ಮೇಲೆ ನಡೆದ ಅತ್ಯಾಚಾರವನ್ನ ಖಂಡಿಸುವೆ ಎಂದರು.

ಬಿಜೆಪಿ ಕಾರ್ಮಿಕರ ಕೆಲಸದ ಅವಧಿಯನ್ನ‌ ಬದಲಾಯಿಸಿದ್ದಾರೆ. ಈ ಕಾನೂನನ್ನ‌ಬೆಂಬಲಿಸಿದ ಮಾಜಿ ಡಿಸಿಎಂ ಈಶ್ವರಪ್ಪ ಮತ್ತು ಬಿಎಸ್ ವೈ ಕುಟುಂಬ ವಿರೋಧಿಸಿಲ್ಲ. ಇವರಿಗೆ ಬೆಂಬಲಿಸದಂತೆ ಮನವಿ ಮಾಡಿಕೊಂಡರು.

ಶಾಹೀ ಗಾರ್ಮೆಂಟ್ಸ್ ನಲ್ಲಿ 5-6 ಸಾವಿರ ಜನ ಮಹಿಳೆಯರಿದ್ದಾರೆ. 240 ಎಕರೆಯನ್ನ ಕನಿಷ್ಠ ವೇತನ ಕೊಡಲಾಗುತ್ತಿಲ್ಲ. ಕಾರ್ಮಿಕ ಮಹಿಳೆಯರನ್ನ‌ ಶೋಷಣೆ ಮಾಡಲಾಗುತ್ತಿದೆ. ದೈಹಿಕವಾಗಿಯಲ್ಲ ಕಾರ್ಮಿಕ ಕಾನೂನನ್ನ ನೀಡಲಾಗುತ್ತಿಲ್ಲ. ಇಙತಹ ಕಾರ್ಮಿಕ ವಿರೋಧಿಗಳಿಗೆ ಚುನಾವೇಯಲ್ಲಿ ಪಾಠಕಲಿಸಬೇಕಿದೆ ಎಂದು ಆರೋಪಿಸಿದರು.

ಈ ಗಾರ್ಮೆಂಟ್ಸ್ ನಲ್ಲಿ ಕೆಲ ಸ್ಲೀಪಿಂಗ್ ಪಾರ್ಟನರ್ ಇದ್ದಾರೆ. ಇವರ ಸಹಾಯದಿಂದ ಕಾರ್ಖಾನೆ ಜನರು ಬದುಕಲು ಯೋಗ್ಯ ಇಲ್ಲದಂತೆ ಮಾಡಿದ್ದಾರೆ. ಇವರಿಗೆ ಬುದ್ದಿಕಲಿಸಬೇಕಿದೆ. ನ್ಯಾಷನಲ್ ಹೈವೆ ನಿರ್ಮಾಣಕ್ಕೆ ಶಿವಮೊಗ್ಗ ಮೈನಿಂಗ್ ಇಲ್ಲ. ಆದರೆ ಅಲ್ಲಿಗೆ ಲೋಡ್ ಗಟ್ಟಲೆ ಹೇಗೆ ಬರ್ತಾವೆ. ಆ ಕಲ್ಲು ಜೋರೆಯಾರದ್ದು ಎಂಬುದರ ಬಗ್ಗೆ ಹೆಸರಿಸಬಹುದಾ? ‌ಎಂದು ಪ್ರಶ್ನಿಸಿದರು.

ಶಿವಮೊಗ್ಗ ರಾಜಕಾರಣಿಗಳು ಪ್ರತಿಯೊಂದು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಹಿರಿಯರನ್ನ ಮುಗಿಸುವ ಒಳಸಂಚು ಇದೆ. ಈಶ್ವರಪ್ಪ ಕೊನೆಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ, ಪದ್ಮನಾಭ್, ಶಿ.ಜುಪಾಶ, ವೈ.ಹೆಚ್ ನಾಗರಾಜ್, ಸಂತೋಷ್ ಆಯನೂರು, ಹಿರಣಯ್ಯ ಧೀರಾಜ್ ಹೊನ್ನವಿಲೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/13712

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket