ಚೋರ್ ಬಜಾರ್ ನಲ್ಲಿ ಬಟ್ಟೆ ಖರೀದಿಗೆ ಬಂದವರು ಚಿನ್ನಾಭರಣ ಕಳೆದುಕೊಂಡರು

ಸುದ್ದಿಲೈವ್/ಶಿವಮೊಗ್ಗ

ಚೋರ್ ಬಜಾರ್ ನಲ್ಲಿ ಬಟ್ಟೆ ಖರೀದಿಗೆ ಬಂದಿದ್ದವರು ಚಿನ್ನಾಭರಣಗಳನ್ನ ಕಳೆದುಕೊಂಡಿರುವ ಘಟನೆ ನಡೆದಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏ.26 ರಂದು ಹುಣಸೇಕಟ್ಟೆಯಿಂದ ಮಾರತಿ ಓಮ್ನಿಯಲ್ಲಿ ಇಬ್ಬರು ಮಹಿಳೆಯರು ಅರಳೀಹಳ್ಳಿಗೆ ಬಂದು ತನ್ನ ಅಕ್ಕನ ಮನೆಯಲ್ಲಿದ್ದ ತಾಯಿಯನ್ನ ಕರೆದುಕೊಂಡು ಮದ್ಯಾಹ್ನ ಶಿವಮೊಗ್ಗ ನಗರ ಚೋರ್ ಬಜಾರ್ ನಲ್ಲಿ ಬಟ್ಟೆ ಖರೀದಿಗೆ ಬಂದಿದ್ದಾರೆ.

ಚೋರ್ ಬಜಾ‌ರ್ ಪಕ್ಕದಲ್ಲಿದಲ್ಲಿರುವ ರಸ್ತೆಯಲ್ಲಿ ಕಾರ್ ನಿಲ್ಲಿಸಿ ಕಾರಿನ ಸೀಟಿನ ಕೆಳಭಾಗದಲ್ಲಿ ಸಣ್ಣ ಮೇಕಪ್ ಬಾಕ್ಸ್ ಹಾಗೂ ಸುಮಾರು 30 ಗ್ರಾಂ ತೂಕದ ಬಂಗಾರದ ಸರ ಅಂದಾಜು ಬೆಲೆ 1.50.000/- ರೂ. ಸುಮಾರು 12 ಗ್ರಾಂ ತೂಕದ ಬಂಗಾರದ ಕಿವಿ ಓಲೆ ಅಂದಾಜು ಬೆಲೆ 50.000/- ರೂ. ಮತ್ತು ಸುಮಾರು 06 ಗ್ರಾಂ ತೂಕದ ಬಂಗಾರದ 2 ಉಂಗುರಗಳು ಅಂದಾಜು ಬೆಲೆ 12,000/- ರೂ ವಡವೆಗಳು ಇದ್ದ ವ್ಯಾನಿಟಿ ಬ್ಯಾಗ್ ಇಟ್ಟು ಚೋರ್ ಬಜಾರ್ ಗೆ ಹೋಗಿದ್ದಾರೆ,

ನಂತರ ಬಟ್ಟೆಗಳನ್ನು ಖರೀದಿಸಿ ರಾತ್ರಿ 07-10 ಗಂಟೆಗೆ ವಾಪಸ್ಸು ಕಾರ್ ನ ಬಳಿ ಬಂದಾಗ ಓಮಿನಿ ಕಾರ್ ನ ಗ್ಲಾಸ್ ಲಾಕ್ ಮುರಿದು ಸೀಟಿನ ಕೆಳಗೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಸುಮಾರು 48 ಗ್ರಾಂ ತೂಕದ ಒಟ್ಟು 2.12.000/- ಬೆಲೆ ಬಾಳುವ ವಡವೆಗಳನ್ನು ಹಾಗೂ ಅಂದಾಜು 500/- ಬೆಲೆಯ ವ್ಯಾನಿಟಿ ಬ್ಯಾಗ್ ಮತ್ತು 200 ರೂ ಬೆಲೆ ಬಾಳುವ ಸಣ್ಣ ಮೇಕಪ್ ಬಾಕ್ಸ್ ಕಳುವಾಗಿದೆ. ಈ ಬಗ್ಗೆ ಚನ್ನಗಿರಿ ತಾಲೂಕಿನ ಕೆರೆಬಿಳಚಿಯ ಇಸ್ಮೈಲ್ ಜುಬೈಉಲ್ಲಾ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/13795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket