ಗ್ಯಾರೆಂಟಿಗಳು ವರವಾಗಲಿದೆಯಾ ಅಥವಾ ಶಾಪವಾಗಲಿದೆಯಾ? ಬಿಜೆಪಿ ಗೆದ್ದುಬೀಗಲಿದೆಯಾ? ಈಶ್ವರಪ್ಪನವರಿಗೆ ಸವಾಲೇನು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಲೋಕ ಸಭಾ ಚುನಾವಣೆಗೆ ಅಖಾಡ ಸಿದ್ದವಾಗಿದೆ. ಯಾರು ಗೆಲ್ಲಬೇಕು ಯಾರಿಗೆ ನಮ್ಮ ಮತ ಎಂಬುದನ್ನ ಮತದಾರರು ನಿರ್ಧರಿಸಿದ್ದಾರೆ.

ಮತದಾರರ ತೀರ್ಮಾನ ಒಂದುಕಡೆ ಇದ್ದರು. ಒಲವು ಯಾಕಡೆ ಇದೆ ಎಂಬುದನ್ನ ಆತ ಮನಬಿಚ್ಚಿ ಮಾತನಾಡುತ್ತಿಲ್ಲವಾದರೂ, ಕೆಲ ಅಭಿಮತವನ್ನ ಹೊರಹಾಕಿದ್ದಾನೆ. ಕೆಲ ಮತದಾರರು ಇನ್ನೂ ಗುಟ್ಟುಬಿಟ್ಟುಕೊಡುತ್ತಿಲ್ಲ.

ಅದರಲ್ಲೂ ಇಂದು ಶಿವಮೊಗ್ಗ ಕೆಎಸ್‌ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಮಾತನಾಡಿಸಲಾಗಿದೆ. ಬಸ್ ನಿಲ್ದಾಣಕ್ಕೆ ಬರುವ ಬಡ ಮಹಿಳೆಯರು ಮತ್ತು ಅಲ್ಪಸಂಖ್ಯಾತ ಮತದಾರರು ಗ್ಯಾರೆಂಟಿ ಪರ ನಿಂತಿದ್ದಾರೆ.

ಅದರಂತೆ ಕಾಂಗ್ರೆಸ್ ಈ ಮತಗಳನ್ನ ಪಡೆಯಲಿದ್ದೇವೆ ಎಂದು ಬೀಗಿದರೆ ಈ ಬಾರಿ ಅವರಿಗೆ ಗಂಡಸರ ಶಾಪ ತಟ್ಟಲಿದೆ. ಗ್ಯಾರೆಂಟಿಗಳನ್ನ‌ ಸರ್ಕಾರ ನೀಡಿದರೂ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೆಲ ಸರ್ಕಾರಿ ಶುಲ್ಕಗಳ ಏರಿಕೆ ಕಾಂಗ್ರೆಸ್ ಗೆ ಮುಳುವಾಗುವ ಸಾಧ್ಯತೆ ಇದೆ. ಬಹುತೇಕ ಗಂಡಸರೆಲ್ಲಾ ಮೊದಿ ಗ್ಯಾರೆಂಟಿ ಎನ್ನುತ್ತಿದ್ದಾರೆ. ಇದರಲ್ಲಿ ಕಮಲವೂ ಇದೆ, ಕಬ್ಬು ಬೆಳೆದ ರೈತನೂ ಇದ್ದಾನೆ.

ಇವಿಷ್ಟು ಕೆಲ ಮತದಾರರ ಸ್ಪಷ್ಟ ತೀರ್ಮಾನಗಳಾದರೆ ಗುಟ್ಟುಬಿಟ್ಟುಕೊಡದ ಮತ್ತೊಂದಿಷ್ಟು ವರ್ಗವಿದೆ. ಪೋಲಿಂಗ್ ಬೂತ್ ನಲ್ಲಿ ಮತಚಲಾಯಿಸುವಾಗ‌ ಯಾರಿಗೆ ಒತ್ತಬೇಕು ಅವರಿಗೆ ಒತ್ತಿ ಬರುವುದಾಗಿ ಅವರು ಹೇಳುತ್ತಿದ್ದಾರೆ. ಮೇಲ್ವರ್ಗದ ಮಹಿಳೆಯರು ಸಹ ಮೋದಿ ಜಪ ಮಾಡುತ್ತಿದ್ದಾರೆ.

ಇದರಿಂದ ಶಿವಮೊಗ್ಗ ನಗರದಲ್ಲಿ ಗ್ಯಾರೆಂಟಿಗಳು ಕಾಂಗ್ರೆಸ್ ಗೆ ಕೈಹಿಡಿಯುತ್ತಿದೆ ಎನಿಸಿದರೂ ಗಂಡಸರ ಶಾಪ ತಟ್ಟಲಿದೆ. ಅಭಿವೃದ್ಧಿ ವಿಷಯದಲ್ಲಿ ರಾಘಣ್ಣ ಗೆಲ್ಲುವ ನಿಶ್ಚಿತವೆನಿಸಿದರೂ ಈಶ್ವರಪ್ಪನವರ ಸ್ಪರ್ಧೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸವಾಲಾಗುವ ಸಾಧ್ಯತೆಯಿದೆ. ಈಶ್ವರಪ್ಪನವರಿಗೆ ಅವರ ಚಿಹ್ನೆಯನ್ನ ಜನರಿಗೆ ತಲುಪಿಸಿ ಮತ ಸೆಳೆಯುವುದೇ ಸವಾಲಾಗಿದೆ. ಉಳಿದ 9 ದಿನಗಳಲ್ಲಿ ಮತ್ತೆ ಚಿತ್ರಣ ಬದಲಾಗಬಹುದಾ ಕಾದು‌ನೋಡೋಣ

ಇದನ್ನೂ ಓದಿ-https://suddilive.in/archives/13763

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket