ರಾಜ್ಯ ಸರ್ಕಾರ ಖಜಾನೆಯನ್ನೇ ಖಾಲಿಚೊಂಬು ಮಾಡಿಟ್ಟಿದೆ-ಕುಮಾರ ಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

ಏ. 26 ರಂದು ನಡೆದ ಮಿದಲ ಹಙಚದ ಚುನಾವಣೆಯಲ್ಲಿ 14 ಕ್ಷೇತ್ರದಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಜೊತೆ ಪ್ರಚಾರ ಮಾಡಿರುವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದರು.

ಹೊಟೆಲ್ ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ನಾಳೆ ಹುಬ್ಬಳ್ಳಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಬಿಜೆಪಿ ಮತ್ತು ಜೆಡಿಎಸ್ ಜೊತೆ ಹೊಂದಾಣಿಕೆಯೊಂದಿಗೆ ಪ್ರಚಾರದ ಬಗ್ಗೆ ಚರ್ಚಿಸಲಾಗುವುದು ನಂತರ ಬೀದರ್ ಗುಲ್ಬರ್ಗದಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ ಎಂದರು.

ಬರದ ವಿಚಾರದಲ್ಲಿ ಸರ್ಕಾರದ ನಡೆ ಸರಿಯಿಲ್ಲ. ಈ ವರ್ಷವೂ ಅಶ್ವಿನಿ ಮತ್ತು ಭರಣಿ ಮಳೆ ಕೈಕೊಡುವ ಸಂಭವವಿದೆ. ಹವಮಾನ ಇಲಾಖೆ ಈ ಬಾರಿಯ ಮಳೆ ಮುನ್ಸೂಚನೆಯನ್ನೂ ನೀಡಿದೆ. ಸರ್ಕಾರ ಘೋಷಣೆಗೆ ಮಾತ್ರ ಸೀಮಿತವಾಗಿದ್ದಾರೆ ಎಂದರು.

ನಮ್ಮ ತೆರಿಗೆ ಮತ್ತು ಹಕ್ಕು ಅಭಿಯಾನದಲ್ಲೂ ಕೇಂದ್ರದ ವಿರುದ್ಧ ಟೀಕೆ ಟಿಪ್ಪಣಿಯಲ್ಲಿ ರಾಜ್ಯ ಸರ್ಕಾರ ತೊಡಗಿದೆ. ಗ್ಯಾರೆಂಟಿಯ ಭಜನೆ ಮಾಡುವುದು ಬಿಟ್ಟು ರಾಜ್ಯ ಸರ್ಕಾರ ಅಭಿವೃದ್ಧಿಯನ್ನ ನಿರ್ಲಕ್ಷಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶ್ವಾಸದಲ್ಲಿ ಹೋಗಬೇಕಿತ್ತು. ಆದರೆ ಈ ಬಗ್ಗೆ ವಿಶ್ವಾಸ ಕಡಿಮೆಯಾಗಿದೆ ಎಂದರು.

ಕುಡಿಯುವ ನೀರು ಮತ್ತು ರೈತರ ಬೆಳೆಗಳಲ್ಲಿ ಪರಿಹಾರದ ವಿಚಾರದಲ್ಲಿ ಬರಬೇಕಿದ್ದ 2000 ಕೋಟಿ ಹಣ ಬಂದಿಲ್ಲ. ರೈತರ ಸಂಕಷ್ಟಗಳಿಗೆ ರಾಜ್ಯ ಸರ್ಕಾರದ ನಿರ್ಲಕ್ಷ ಕಂಡು ಬರುತ್ತಿದೆ. ಕೆಲ ದಕ್ಷಿಣ ಭಾರತದ ಸರ್ಕಾರಗಳು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಸುಪ್ರೀಂ ಕೋರ್ಟ್ ಬರ ವಿಚಾರದಲ್ಲಿ ಚಾಟಿ ಬೀಸಿದೆ ಎಂದು ಹೇಳಿತ್ತಿದೆ. ಹಣ ಕೊಟ್ಟ ನಂತರ ಕಡಿಮೆ ಹಣ ಕೊಡುತ್ತಿರುವುದನ್ನ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸುತ್ತಿದೆ.

ರಾಜ್ಯದ ಖಜಾನೆಯನ್ನ ಖಾಲಿ ಚೊಂಬು ಮಾಡಿಕೊಂಡು ಓಡಾಡುತ್ತಿದ್ದಾರೆ. ಜನತೆಯ ತೆರಿಗೆಯನ್ನ ಸಂಗ್ರಹಿಸಿ ಜನರ ಮೇಲೆ ಹೊರೆ ಹೋರಿಸಲಾಗುತ್ತಿದೆ. ಕೇಂದ್ರ 3453 ಕೋಟಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ಉಪಸಮಿತಿ ನಿಗದಿ ಮಾಡಿ ಬಿಡುಗಡೆಯಾಗಿದೆ. ಸರ್ಕಾರದ ಹಣ ಸದ್ಬಳಕೆ ಮಾಡುವುದನ್ನ ಬಿಟ್ಟು ವಿಧಾನ ಸಭೆಯ ಎದುರು ಚೊಂಬು ಹಿಡಿದುಕೊಂಡು ಕುಳಿತಿದ್ದಾರೆ. ಚುನಾವಣೆ ನಂತರ ಎಷ್ಟು ಸಂಘರ್ಷದ ಮೂಲಕ ಹಣ ಒದಗಿಸುತ್ತಾರೆ ಎಂದು ಪ್ರಶ್ನಿಸಿದರು.

36 ಸಾವಿರ ಕೊಟಿ ಬೆಳೆ ಪರಿಹಾರ ಮತ್ತು 18 ಸಾವಿರ ಕೋಟಿ ಪರಿಹಾರ ನೀಡಿದೆ. ಈ ಹಿಂದೆ4900 ಕೋಟಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ದಾಖಲೆ ನೋಡಬಹುದು ಎಂದು ಹೇಳಿದ್ದಾರೆ. ನಿಯಮಾವಳಿ ಪ್ರಕಾರ ಕೇಂದ್ರ ಹಣ ಬಿಡುಗಡೆ ಮಾಡುತ್ತೆ ಎಂದು ಹೇಳಿಕೆ ಕೊಟ್ಟಾಗ ನನ್ನನ್ನೆ ನಾಡದ್ರೋಹಿಗಳು ಎಂದು ಬಿಂಬಿಸಲಾಯಿತು ಮುಂದಿನ ದಿನಗಳಲ್ಲಿ ಯಾರು ನಾಡದ್ರೋಹಿಗಳು ಎಂದು ಕಾದು‌ನೋಡೋಣ ಎಂದರು.

ಅಧಿಕಾರಿಗಳಿಗೆ ರಾಜ್ಯ ಸರ್ಕಸರ ಸೂಚನೆ ನೀಡಿ ರೈತರ ಸಮಸ್ಯೆಗೆ ಸ್ಪಂಧಿಸಬೇಕು. ಮ್ಯಾಚಿಂಗ್ ಗ್ರ್ಯಾಂಟ್ ನೀಡಲು ರಾಜ್ಯ ಸರ್ಕಾರ ಎಷ್ಟು ಹಣ ಇಟ್ಟುಕೊಂಡಿದೆ ಎಂಬುದು ಜನತೆ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಎನ್ ಡಿಎ ಅಧಿಕಾರದಲ್ಲಿ ಬಂದಾಗ ಜನತೆಯನ್ನ ವಿಶ್ವಾಸದಲ್ಲಿ ನಡೆಸಿಕೊಂಡು ಹೋಗ್ತೀರಿ. ರಾಜ್ಯ ಸರ್ಕಾರ ಬೇಡಿಕೆಗಳನ್ನ ಹೇಗೆ ಬಿಡುಗಡೆ ಮಾಡಬೇಕು ಎಂಬುದನ್ನ ಚಿಂತಿಸಿ ಹೆಜ್ಹೆ ಇಡಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 1500 ಕೋಟಿ ಮೋದಿ ಸರ್ಕಾರ 3400 ಕೋಟಿ ಹಣ ಎನ್ ಡಿ ಆರ್ ಎಫ್ ನಲ್ಲಿ ಬಿಡುಗಡೆ ಮಾಡಿದೆ ಎಂದರು.

ನಿಮ್ಮ‌ಜವಬ್ದಾರಿ ನಿರ್ವಹಣೆ ಮಾಡುವಲ್ಲಿ ವಾರ್ ಫೂಟ್ ನಲ್ಲಿ ಹೆಜ್ಜೆ ಇಡಲು ಸೂಕ್ತ ತೀರ್ಮಾನದೊಂದಿಗೆ ಹೋಗಲು ಸೂಚಿಸಿದರು. 14 ಕ್ಷೇತ್ರದಲ್ಲಿ 13 ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲಲಿದೆ. ಯಾವ ಕ್ಷೇತ್ರ ಎಂಬುದು ಸ್ಪಷ್ಟವಾಗಿಲ್ಲ. ನ್ಯಾಯಾಲಯದ ಸೂಚನೆ ಮೇಲೆ ಬಿಡುಗಡೆಯಾಗಿಲ್ಲ. ಎನ್ ಡಿಆರ್ ಎಫ್ ಹಣ ಬಿಡುಗಡೆಗೆ ಕೇಂದ್ರದ ತೀರ್ಮಾನದ‌ಮೇಲೆ ಬಿಡುಗಡೆಯಾಗಿದೆ ಎಂದರು. ಹೊಸ ಹಣಕಾಸು ಆಯೋಗ ನಿಯಮಾವಳಿ ನಿರ್ಧಾರ ಮಾಡಿದೆ ಎಂದರು.

ಹಾಸನದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿದ್ದಾರೆ. ಮತದಾನಕ್ಕೆ ಮೂರುದಿನಗಳ ಹಿಂದೆ ಪೆನ್ ಡ್ರೈವ್ ಬಿಟ್ಟವರು ಯಾರು ಕಾರಣವೇನು ಎಂಬುದು ಸ್ಪಷ್ಟವಾಗಬೇಕು. ಎಸ್ ಐಟಿ ರಚನೆಯಾಗಿದೆ. ಯಾರು ತಪ್ಪು ಮಾಡಿದ್ದಾರೆ ಅನುಭವಿಸುತ್ತಾರೆ. ಫಲಿತಾಂಶದ ಮೇಲೆ ಪರಿಣಾಮ ಬೀರಲ್ಲ. ಇಲ್ಲಿ ವ್ಯಕ್ತಿಯ ಪ್ರಶ್ನೆ. ಕುಟುಂಬ ಬೇಡ. ಆರೋಪಿಸುವವು ಸಾಚಾನಾ ಎಂದು ವಾಗ್ದಾಳಿ ನಡೆಸಿದರು.

ಇಂತಹ ವಿಷಯಗಳು ನನಗೆ ಮಾತ್ರ ಅಲ್ಲ ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ. ಪ್ರಜ್ವಲ್ ವಿಷಯ ನನಗೆ ಗೊತ್ತಿಲ್ಲ. ಅವರು ಪ್ರತ್ಯೇವಾಗಿದ್ದಾರೆ. ವೈಯುಕ್ತಿಕವಾಗಿ ನಡೆದ ವಿಷಯ. ಅವರು ಎಲ್ಲಿ ಹೋಗ್ತಾರೆ ಗಮನಿಸಲು ಆಗೊಲ್ಲ. ವರದಿ ಬಂದ ನಂತರ ಪಕ್ಷ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪಾರದರ್ಶಕ ತನಿಖೆ ನಡೆಯಲಿ. ನಾನು ಮತ್ತು ದೇವೆಗೌಡರು ಗೌರವಿತವಾಗಿ ನಡೆದುಕೊಂಡಿದ್ದೇವೆ. ಲಕ್ಷಾಂತರ ಜನ ನನ್ನ ಬಳಿ ಬಂದಿದ್ದಾರೆ. ಹಲವಾರು ತಾಯಿಂದರು ನನ್ನ ಬಳಿ ಬಂದಿದ್ದಾರೆ. ವಿಷಯ ಈಗ ಬಂದಿದೆ ಮೊದಲೇ ಬಂದಿದ್ದರೆ ಈ ಬಗ್ಗೆ ಎಚ್ಚರಿಕೆ ವಹಿಸಬಹುದಿತ್ತು. ಪ್ರತಿ ಮನುಷ್ಯನಿಗೆ ಜವಬ್ದಾರಿ ಇರಬೇಕು.

ಸುಮಲತಾ ಪ್ರಚಾರಕ್ಕೆ ಕುಮಾರಸ್ವಾಮಿ ಕರೆದಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ. ಬಿಜೆಪಿ ನಾಯಕರಿಗೆ ಬೇರೆಡೆ ಪ್ರಚಾರಕ್ಕೆ ಕಳುಹಿಸರಬಹುದು. ನಾನೇ ಸ್ವತಃ ಅವರ ಮನೆಗೆ ಹೋಗಿ ಆಹ್ವಾನಿಸಿದ್ದೆ. ಅವರು ಮತಚಲಾಯಿಸಿದ್ದಾರೆ. ಬಿಜೆಪಿಗೆ ಮತ‌ಹಾಕಿದ್ದಾರೆ ಎಂದರು.

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನದಿಂದ ನಾಯಕರನ್ನ ಕಳೆದುಕೊಂಡಿದ್ದೇವೆ. ಕುಟುಂಬಕ್ಕೆ ಸಾವಿನ‌ ನೋವು ಭರಿಸಲು ದೇವರು ಶಕ್ತಿ ನೀಡಲಿ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/13804

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket