ಪ್ರತಿಷ್ಠಿತ ಫೈನಾನ್ಸ್ ನಿಂದ ಪಡೆದ ವಾಹನಗಳ ಮೇಲಿನ ಸಾಲ‌ ಮರುಪಾವತಿಸದವರ ವಿರುದ್ಧ 7 ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಬಿ.ಹೆಚ್ ರಸ್ತೆಯ ಪ್ರತಿಷ್ಠಿತ ಫೈನಾನ್ಸ್ ನಲ್ಲಿ ವಾಹನಗಳ ಸಾಲ ಪಡೆದು ಕಂತು ಅರ್ಧಂಬರ್ಧ ಕಟ್ಟಿದವರ ವಿರುದ್ಧ ದೂರು ದಾಖಲಾಗಿದೆ. ಶ್ರೀರಾಮ್ ಫೈನಾನ್ಸ್ ನಲ್ಲಿ ಬಡ್ಡಿಕಟ್ಟದೆ ಇರುವರ ವಿರುದ್ಧ 7 ಎಫ್ ಐಆರ್ ದಾಖಲಾಗಿದೆ.

ಎಲ್ಲಾ ಎಫ್ಐಆರ್ ಗಳು 2021-2022 ನೇ ಸಾಲಿನಲ್ಲಿ ತೆಗೆದುಕೊಂಡ ವಾಹನಗಳ ಮೇಲಿನ‌ಸಾಲಗಳಾಗಿದೆ. ಎಲ್ಲಾ ಎಫ್ಐಆರ್ ಗಳು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇಶವ ಬಿನ್ ಜಾನಕಿರಾಮ್ 8,32,580 ರೂ ಸಾಲ ಪಡೆದಿದ್ದು ಇದರಲ್ಲಿ 3,13,256 ರೂ. ಕಟ್ಟಿದ್ದು ಬಾಕಿಯನ್ನ ಉಳಿಸಿಕೊಂಡಿದ್ದಾರೆ. ಲೀಗಲ್ ನೋಟಿಸ್ ನೀಡಿದರೂ ನೋಟೀಸ್ ಸ್ವೀಕರಿಸದೆ ಇರುವುದರಿಂದ ಅವರ ವಿರುದ್ದ ದೂರು ದಾಖಲಾಗಿದೆ. ಕೇಶವ ಅವರಿಗೆ ಸಯ್ಯದ್ ಪೀರ್ ಅವರು ಸಾಕ್ಷಿಯಾಗಿದ್ದರು. ಅವರ ವಿರುದ್ಧ ದೂರು ದಾಖಲಾಗಿದೆ.

1,34,90,770 ರೂ ಸಾಲಪಡೆದ ಶ್ರೀನಿವಾಸ್ ಎಂಬುವರು ಫೈನಾನ್ಸ್ ನಿಂದ ಸಾಲಪಡೆದು, 6,42,500 ರೂ. ಹಣ ಕಟ್ಟಿದ್ದು ಉಳಿದ ಹಣವನ್ನ‌ಕಟ್ಟದೆ ಸಂಸ್ಥೆಯೊಂದಿಗೆ ಸಹಕರಿಸಿಲ್ಲ. ಶಂಕರ್ ಎಂಬುವರು ಸಾಕ್ಷಿ ಹಾಕಿದ್ದು ಇವರು ಸಹ ಸಹಕರಿಸದ ಕಾರಣ ಇಬ್ವರ ವಿರುದ್ಧ ದೂರು ದಾಖಲಾಗಿದೆ.

ಸವಾಯಿ ಪಾಳ್ಯದ ನಿವಾಸಿ ಸಯ್ಯದ್ ರಜಾಕ್ ಎಂಬುವರು 2022 ನೇ ಸಾಲಿನಲ್ಲಿ 1,10,000 ಸಾಲಪಡೆದಿದ್ದು 35,299 ರೂ. ಹಣಕಟ್ಟಿದ್ದು ಉಳಿದಿದ್ದನ್ನ‌ಕಟ್ಟದೆ ಇರುವುದರಿಂದ ಇವರ ವಿರುದ್ಧ ದೂರು ದಾಖಲಾಗಿದೆ. ಇವರಿಗೆ ಮೊಹ್ಮದ್ ಅತಾವುಲ್ಲಾ ಜಾನೀನು ಹಾಕಿದ್ದು ಇವರ ವಿರುದ್ಧವೂ ದೂರು ದಾಖಲಿಸಲಾಗಿದೆ.

2022 ನೇ ಸಾಲಿನಲ್ಲಿ ಖಾಜಾಫೀರ್ ಎಂಬುವರು 10,13,558 ರೂ ಸಾಲವನ್ನ ಪಡೆದಿದ್ದು ನಂತರ ಕಂತುಗಳನ್ನ‌ಕಟ್ಟಿರುವುದಿಲ್ಲ. ಇವರ ವಿರುದ್ಧ ಲೀಗಲ್ ನೋಟೀಸ್ ಜಾರಿ ಮಾಡಿದರೂ ಯಾವುದೇ ನೋಟೀಸ್ ಸ್ವೀಕರಿಸದೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿರುವುದಾಗಿ ದಾಖಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇವರಿಗೆ ಸಮೀರ್ಅಹ್ಮದ್ ಜಾಮೀನು ಆಗಿದ್ದು ಇವರ ವಿರುದ್ದ ದೂರು ದಾಖಲಾಗಿದೆ.

2022 ನೇ ಸಾಲಿನಲ್ಲಿ ಮೈದೊಳಲಿನ ಆರ್ ಚಂದ್ರಪ್ಪ ಎಂಬುವರು ವಾಹನ ಖರೀದಿಗೆ 19,10,688 ರೂ. ಸಾಲದ ಕಂತು ಕಟ್ಟದೆ ಸಂಸ್ಥೆ ಗೆ ಸಹಕರಿಸದೆ ಇದ್ದು, ಸಾಲಮರುಪಾವತಿ ಮಾಡದೆ ಇದ್ದ ಕಾರಣ ಸಂಸ್ಥೆಯ ಸಿಬ್ಬಂದಿಗಳು ಮನೆಯ ಬಳಿ ಹೋದಾಗ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ಏನಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ. ಇವರಿಗೆ ಪ್ರಶಾಂತ್ ಎಂಬುವರು‌ ಜಾಮೀನಾಗಿದ್ದು ಇಬ್ವರ ವಿರುದ್ಧ ದೂರು ದಾಖಲಾಗಿದೆ.

2022 ರಲ್ಲಿ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಅಮೃತ ಎಂಬುವರು 3,66,786 ರೂ ಹಣ ಸಾಲ ಪಡೆದು ನಂತರ ಕಂತುಕಟ್ಟಲು ಸಹಕರಿಸಿಲ್ಲ. ಸಾಲ ಮರು ಪಾವತಿಗೆ ಸಿಬ್ವಂದಿಗಳ ಮನೆಗೆ ತೆರಳಿದ ಸಿಬ್ವಂದಿಗೂ ಬೈದು ನೀವು ಏನಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ. ಇವರಿಗೆ ನರಸಿಂಹ ಎಂಬುವರು ಜಾಮೀನು ಹಾಕಿದ್ದು ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ಹೊಳೆಹನಸವಾಡಿಯ ನಿವಾಸಿ ಪ್ರಶಾಂತ್ ಎಂಬುವರು 2022 ರಲ್ಲಿ 7,64,374ಬರೂ ಸಾಲ ಪಡೆದಿದ್ದು, ಸಾಲಮರುಪಾವತಿಗೆ ಕಂತುಗಳನ್ನ ಕಟ್ಟದೆ ಇದ್ದು, ಮನೆಗೆ ಸಿಬ್ಬಂದಿಗಳು ಹೇದ ವೇಳೆ ಬೈದಿದ್ದು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದು ಇವರಿಗೆ ದೇವಿ ಕುಮಾರ್ ಎಂಬುವರು ಜಾಮೀನು ನೀಡಿದ್ದರು.‌ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/13784

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close