ಮರು ಮೌಲ್ಯಮಾಪನ: ಶಿವಮೊಗ್ಗದ ಸಿಂಚನ ರಾಜ್ಯಕ್ಕೆ 4ನೇ ರ‍್ಯಾಂಕ್‌

ಸುದ್ದಿಲೈವ್/ಶಿವಮೊಗ್ಗ

ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಇಲ್ಲಿನ ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಹೆಚ್ ಎಂ 600ಕ್ಕೆ 593 ಅಂಕಗಳಿಸಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ.

ಸಿಂಚನ ಎಚ್ ಎಂ ಶಿವಮೊಗ್ಗದ ಶಿಕ್ಷಕಿ ವಾಣಿ ಆರ್ ಜೆ, ದಿ ಹಾಲೇಶ್ ಎನ್ ದಂಪತಿ ಪುತ್ರಿ, ಎಸೆಸೆಲ್ಸಿ ಯಲ್ಲಿ ಶೇ. 92.3 ಅಂಕ ಪಡೆದು ಕಲಾ ವಿಭಾಗವನ್ನು ಆಯ್ದುಕೊಂಡಿದ್ದ ಸಿಂಚನ ಮುಂದೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮರು ಮೌಲ್ಯಮಾಪನದಲ್ಲಿ 2ಅಂಕ ಹೆಚ್ಚುವರಿ.
ಮೊದಲಿಗೆ 600 ಕ್ಕೆ 591 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್‌ ಪಡೆದಿದ್ದ ಸಿಂಚನ, ಇತಿಹಾಸ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ 2ಅಂಕ ಹೆಚ್ಚು ಬಂದಿದೆ ಒಟ್ಟು 593 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌ ಆಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

ಇದನ್ನೂ ಓದಿ-https://suddilive.in/archives/13668

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close