ಕ್ರೈಂ ನ್ಯೂಸ್

ಉ.ಕ ಮಹಿಳೆ ಶಿವಮೊಗ್ಗದಲ್ಲಿ ಸಾವು-ಕೆಎಫ್ ಡಿಗೆ ಬಲಿ

ಸುದ್ದಿಲೈವ್/ಶಿವಮೊಗ್ಗ

ಉತ್ತರ ಕನ್ನಡದ‌ ವೃದ್ಧೆಯೊಬ್ಬರು ಕೆಎಫ್ ಡಿ ಗೆ ಬಲಿಯಾಗಿದ್ದಾರೆ. ಮಣಿಪಾಲ್ ನಿಂದ ಶಿವಮೊಗ್ಗದ ಮೆಗ್ಗಾನ್ ನಲ್ಲಿ ದಾಖಲಾಗಿದ್ದವರು ನಿನ್ನೆ ಸಾವಾಗಿದೆ.

ಫೆ.1 ರಂದು ಕೆಎಫ್ ಡಿಯಿಂದಾಗಿ ವೃದ್ಧೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಗೆ ದಾಖಲಿಸಲಾಗಿತ್ತು. ನಿನ್ನೆ ವೈದ್ಯರ ಅನುಮತಿಯಿಲ್ಲದೆ ಮಣಿಪಾಲ್ ನಿಂದ ವಾಪಾಸ್ ಉತ್ತರ ಕನ್ನಡಕ್ಕೆ ಕರೆದೊಯ್ಯಾಗುತ್ತಿತ್ತು. ಇವರನ್ನ ಆರೋಗ್ಯ ಕುಟುಂಬ ಇಲಾಖೆ ಮನವರಿಕೆ ಮಾಡಿ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿತ್ತು.

ಮೆಗ್ಗಾನ್ ನಲ್ಲಿ ನಿನ್ನೆ ವೃದ್ಧೆ ಕೊನೆ ಉಸಿರು ಎಳೆದಿದ್ದಾರೆ. ಇದರಿಂದ ಕೆಎಫ್ ಡಿ ಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಇವರಿಗೆ ಇತರೆ ಹೃದಯ ಸಂಬಂಧಿ ಖಾಯಿಲೆ ಮತ್ತು‌ ನಿಮೋನಿಯಾ ಸಮಾಸ್ಯೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ-https://suddilive.in/archives/9617

Related Articles

Leave a Reply

Your email address will not be published. Required fields are marked *

Back to top button