ಕ್ರೈಂ ನ್ಯೂಸ್

ಗಾಂಜಾ ಹೊಡೆದು ಗಲಾಟೆ ಮಾಡ್ಬೇಡಿ ಎಂದಿದ್ದಕ್ಕೆ ಚಾಕುವಿನಿಂದ ಇರಿಯಲು ಯತ್ನ

ಸುದ್ದಿಲೈವ್/ಶಿವಮೊಗ್ಗ

ಆಟೋದಲ್ಲಿ ಕುಳಿತು ಗಾಂಜಾ ಹೊಡೆಯುತ್ತಿದ್ದ ಯುವಕರಿಗೆ ಗಾಂಜಾ ಹೊಡೆಯಬೇಡಿ ಎಂದು ಮಹಿಳೆಯೊಬ್ಬಳು ಹೇಳಿದ್ದಕ್ಕೆ ಮನೆಯ‌ಮುಂದೆ ಬಂದು ಆತನ ಮಗನಿಗೆ ಚಾಕುಚುಚ್ಚಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ.

ಅರ್ಬಾಜ್ ಎಂಬ ಯುವಕ ಆನಂದ್ ರಾವ್ ಬಡಾವಣೆಯಲ್ಲಿ ಆಟೋದಲ್ಲಿ ಕುಳಿತು ಸ್ನೇಹಿತರೊಂದಿಗೆ ಗಾಂಜಾ ಸೇವಿಸಿ ಗಲಾಟೆ ಮಾಡುತ್ತಿದ್ದರಿಂದ ಅಲ್ಲೇ ಇದ್ದ ದಿಲ್ಶಾದ್ ಎಂಬ ಮಹಿಳೆ ಜೋರು ಮಾಡಿ ಕಳುಹಿಸಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಯುವಕ ಅರ್ಬಾಜ್ ನಿನ್ನೆ ದಿಲ್ಶಾದ್ ಮನೆಯ ಮುಂದೆ ಗಲಾಟೆ ನಡೆಸಿದ್ದಾನೆ.

ರಜಾ ಹಾಕಿ ಬೆಂಗಳೂರಿನಿಂದ ಬಂದಿದ್ದ ದಿಲ್ಶಾದ್ ಮಗ ನಿಶಾದ್ ಗೆ ಅರ್ಬಾಜ್ ಆತನ ರಸ್ತೆ ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆ. ನಿನ್ನನ್ನ ಬಿಡೊಲ್ಲ ಎಂದು ಗದರಿಸಿದ್ದಾರೆ.

ಗಾಬರಿಗೊಳಗಾದ ಕುಟುಂಬ ಅರ್ಬಾಜ್ ಎಂಬ ಯುವಕನಿಂದ ರಕ್ಷಣೆಕೋರಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/9340

Related Articles

Leave a Reply

Your email address will not be published. Required fields are marked *

Back to top button