ರಾಜಕೀಯ ಸುದ್ದಿಗಳು

ಜ್ಞಾನದೇಗುಲವಿದು ದೈರ್ಯವಾಗಿ ಪ್ರಶ್ನಿಸು-ಬಿಜೆಪಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಮುರಾರ್ಜಿ ದೇಸಯಿ ವಸತಿ ಶಾಲೆಗಳಲ್ಲಿ ಘೋಷವಾಕ್ಯವನ್ನು ಭದಲಾವಣೆ ಮಾಡಿರುವುದನ್ನು ಖಂಡಿಸಿ ಇಂದು ಬಿಜೆಪಿ ಯುವಮೋರ್ಚಾ ವಿನೋಬ ನಗರದಲ್ಲುರುವ ಸಮಾಜ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ ನಡೆಸಿದೆ.

ಕರ್ನಾಟಕದಲ್ಲಿ ಬರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ರಾಷ್ಟ್ರ ಕವಿ ಕುವೇಂಪು ಅವರ ಘೋಷ ವಾಕ್ಯವಾದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಘೋಷ ವಾಕ್ಯವನ್ನು ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದು ಬದಲಾವಣೆ ಮಾಡಲಾಗಿದೆ.

ಈ ವಾಕ್ಯವು ಮಕ್ಕಳ ತಿಳಿ ಮನಸ್ಸಿನಲ್ಲಿ ಕಲ್ಲು ಹಾಕುವ ನೀಚ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾದ ಹೆಚ್.ಸಿ ಮಾಹದೇವಪ್ಪನವರು ಮಾಡಿರುವುದಾಗಿ ಬಿಜೆಪಿ ಆರೋಪಿಸಿದೆ. ಈ ಮುಲಕ ನಮ್ಮ ರಾಷ್ಟ್ರ ಕವಿ ಆದ ಕುವೆಂಪು ಅವರ ಘೋಷ ವಾಕ್ಯವನ್ನು ತಗೆದು ಹಾಕಿ ಅವಮಾನ ಮಾಡಿದ ಮಹದೇವಪ್ಪರ ವಿರುದ್ಧ ಮಾನ್ಯ ಮುಖ್ಯಮಂತ್ರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಯುವಮೋರ್ಚಾ ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ಶಾಸಕ ಚೆನ್ನಬಸಪ್ಪ, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ರಾಹುಲ್ ಬಿದರೆ, ಪ್ರಧಾನ ಕಾರ್ಯದರ್ಶಿಗಳು ಯುವರಾಜ್ ಅಭಿಶೇಖ್, ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಧೀನ್ ದಯಾಳು, ಬಿಜೆಪಿ ಮುಖಂಡರಾದ ಆರ್ ಕೆ ಸಿದ್ದರಾಮಣ್ಣ ಮೊದಲಾದವರು ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/9286

Related Articles

Leave a Reply

Your email address will not be published. Required fields are marked *

Back to top button