ರಾಜಕೀಯ ಸುದ್ದಿಗಳು

ಯಾರಿಗೋ ಬೌಲಿಂಗ್ ಮಾಡುದ್ರೆ ಯಾರೋ ಬ್ಯಾಟಿಂಗ್ ಆಡಿದ್ದಾರೆ-ಆಯನೂರು ಮಂಜುನಾಥ್

ಸುದ್ದಿಲೈವ್/ಶಿವಮೊಗ್ಗ

ನಾನು ಯಾರಿಗೋ ಬೌಲಿಂಗ್ ಮಾಡಿದ್ರೆ ಯಾರೋ ಬ್ಯಾಟಿಂಗ್ ಮಾಡು ಬಂದಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರ ಆರೋಪಕ್ಕೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೆಸಿಟ್ ಕಾಲೇಜಿನ ಬಳಿಯ ಫ್ಲೈ ಓವರ್ ಕೆಳಗೆ ನನ್ನ ಆಸ್ತಿ ಇದೆ ಎಂದು ನಿನ್ನೆ ಸಂಸದರು ಆರೋಪಿಸಿದ್ದಾರೆ. ಸಂಸದರ ಹೇಳಿಕೆಯ ಆಧಾರದ ಮೇರೆಗೆ ನನ್ನ ಆಸ್ತಿಯನ್ನ ಹುಡುಕಿಕೊಂಡುಬರಬೇಕಿದೆ. ಇಲ್ಲವಾದರೆ ಅವರನ್ನೇ ಕೇಳಬೇಕಿದೆ ಎಂದು ಹೇಳಿದರು.

ಅವರು ಹಲವಾರು ವಿಷಯವನ್ನ ಕೆಲವರು ಎತ್ತಿದ್ದಾರೆ. ನಾನು ಸಂಸದರು ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿಲ್ಲ. ಸಂಸದ ಡಿಕೆ ಸುರೇಶ್ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಗೆ ಆರೋಪಿಸಿದ್ದಾರೋ ಹಾಗೆ ಜಿಲ್ಲೆಗೆ ಅನ್ಯಾಯವಾಗಿದೆ ಎಂದಿರುವೆ ಎಂದು ಸ್ಪಷ್ಟಪಡಿಸಿದರು.

ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ತೆರೆಯುವುದಾಗಿ ಕೇಂದ್ರ ಗೃಹ ಸಚಿವರು ಹೇಳಿದ್ದರು. ಆದರೆ ಅವರು ಹೇಳಿ 5 ವರ್ಷ ಕಳೆದಿದೆ ಯಾಕೆ ಇನ್ನೂ ಸಂಶೋಧನಾ ಕೇಂದ್ರವಾಗಿಲ್ಲ.‌ ಸಮಾವೇಶದಲ್ಲಿ ಲಕ್ಷಾಂತರ ಅಡಿಕೆ ಬೆಳೆಗಾರರು ಸೇರಿದ್ದರು. ಏನೂ ಕ್ರಮ ಜರುಗಿಲ್ಲ ಎಂದು ಆರೋಪಿಸಿರು.

ಅದರಂತೆ ಶರಾವತಿ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಆದರೆ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಅಭಿವೃದ್ಧಿ ಆಗಿದೆ ಅಥವಾ ಇಲ್ಲವಾ ಎಂಬ ವಿಷಯ ಅವರಿಗೆ ಗೊತ್ತಿದೆ. ನಾವು ಅಭಿವೃದ್ಧಿ ಆಗಿಲ್ಲವೆಂದು ಹೇಳೋದು ಸಹಜ ಅವರು ಅಭಿವೃದ್ಧಿ ಆಗಿದೆ ಎಂದು ಹೇಳೋದು ಸಹಜ ಆದರೆ ಸಂಸದರ ಹೇಳಿಕೆ ಚುನಾವಣೆಯ ಹೇಳಿಕೆಗೆ ಸೀಮಿತವಾಗಿದೆ ಎಂದು ಹೇಳಿದರು.

ಸವಳಂಗ ರಸ್ತೆಯಲ್ಲಿ ನಮ್ಮಪ್ಪಂದು ಯಾವ ಆಸ್ತಿ ಇಲ್ಲ ಎಂದಿದ್ದಾರೆ. ಅಂದರೆ ಆ‌ಮಾರ್ಗದಲ್ಲಿ ಬಿಟ್ಟು‌ ಅಷ್ಟದಿಕ್ಕುಗಳಲ್ಲಿ ಆಸ್ತಿ ಇದೆಬೆಂದು‌ ಅರ್ಥವಾಗಿದೆ. ನನ್ನ ಆಸ್ತಿಯನ್ನ‌ ಉಲ್ಲೇಖಿಸಿದ್ದಾರೆ. ಎಲ್ಲಿದೆವೆಂದು ಹುಡುಕಬೇಕಿದೆ ಎಂದರು.

ಎನ್ ಪಿ ಎಸ್ ನೌಕರರಿಗೆ ಒಪಿಎಸ್ ಯೋನೆ ನೀಡುವ ವಿಚಾರದಲ್ಲಿ ಈ ಬಾರಿಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸುವ ನಿರೀಕ್ಷೆ ಇದೆ. 1995 ರ ನಂತರ ಆರಂಭವಾದ ಅನುದಾನಿತ ಶಾಲೆಗಳಿಗೆ ಅನುದಾನದ ಕೊರತೆ ಇದೆ. ಅವುಗಳ ಬಗ್ಗೆಯೂ ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಿಸುವ ನಿರೀಕ್ಷೆ ಇದೆ. ನೌಕರರ ಎಲ್ಲಾ ಸಮಸ್ಯೆಗಳನ್ನೂ ಸರಿದೂಗಿಸುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ-https://suddilive.in/archives/9023

Related Articles

Leave a Reply

Your email address will not be published. Required fields are marked *

Back to top button