ರಾಜಕೀಯ ಸುದ್ದಿಗಳು

ಶಿಕಾರಿಪುರದಲ್ಲಿ ಗೆಲ್ಲಲು ತಿಣಕಾಡಿದ್ದೀರಿ-ಈಗ ಲೋಕಸಭೆ ಚುನಾವಣೆಯಿದೆ-ಸ್ವಾಮೀಜಿ ಎಚ್ಚರಿಕೆ

ಸುದ್ದಿಲೈವ್/ಶಿವಮೊಗ್ಗ

ಪಂಚಮಸಾಲಿ ಲಿಂಗಾಯಿತರಿಗೆ ಮೀಸಲಾತಿ  ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಯಿತು. ಚೌಕಿ ಮಠದಲ್ಲಿ ಇಷ್ಟ ಲಿಂಗ ಪೂಜೆ ನಡೆಸಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಈ ಮೊದಲು ಪ್ರತಿಭಟನೆಯ ವೇಳೆ ಇಷ್ಟಲಿಂಗ ಪೂಜೆ ನಡೆಸಲಾಗುವುದು ಎಂದು ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದರು. ಆದರೆ ದೇವರನ್ನ  ರಸ್ತೆಗೆ ತರಬಾರದು ಎಂಬ ಆಕ್ಷೇಪಣೆ ಹಿನ್ಬಲೆಯಲ್ಲಿ ಚೌಕಿ ಮಠದಲ್ಲಿ ಪೂಜೆ ನಡೆಸಿ ನಂತರ ಪ್ರತಿಭಟನೆ ನಡೆದಿದೆ.

ಚೌಕಿ ಮಠದಲ್ಲಿ ಕೂಡಲ ಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿಗಳಿಂದ ಇಷ್ಟ‌ಲಿಂಗ ಪೂಜೆ ನಡೆಸಿ ನಂತರ ಶಿವಪ್ಪ ನಾಯಕ ಪ್ರತಿಮೆಯಿಂದ ಗೋಪಿ ವೃತ್ತದ ವರೆಗೆ ಮೆರವಣಿಗೆ ನಡೆಯಲಾಯಿತು. ಪ್ರತಿಭಟನೆ

ಗೋಪಿ ವೃತ್ತದಲ್ಲಿ ಮಾತನಾಡಿದ ಸ್ವಾಮೀಜಿಗಳು, ಲಕ್ಷ ಮಂದಿ ಭಾಗವಹಿಸಿಲ್ಲ ಎಂಬ ಲೆಕ್ಕಾಚಾರವಲ್ಲ. ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆಯೇ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದರು.

ಬೆಳಗಾವಿ ಅಧಿವೇಶನದ ವೇಳೆ ವಿಧಾನ ಸಭೆ ಮುತ್ತಿಗೆ ಹಾಕಲು ಸಿದ್ದತೆ ಮಾಡಿಕೊಂಡಾಗ ಕಾಂಗ್ರೆಸ್ ನಾಯಕು ಬೊಮ್ಮಾಯಿ ಮಾತನ್ನ‌ಬಹಳ ಬಾರಿ ಕೇಳಿದ್ದೀರಿ ಈಗ ಸಿಎಂ‌ ಸಿದ್ದರಾಮಯ್ಯನವರ ಮಾತು ಒಮ್ಮೆ ಕೇಳಿ ಎಂದರು. ಅಧಿವೇಶನ ಮುಗಿದು 2 ತಿಂಗಳಾಯಿತು. ಏನೂ ಕ್ರಮ ನಡೆಯಲಿಲ್ಲ ಎಂದು ಆರೋಪಿಸಿದರು.

ಯತ್ನಾಳ್ ಪ್ರಾಮಾಣಿಕತೆ ಇದೆ. ಭ್ರಷ್ಠಾಚಾರ ರಹಿತ ರಾಜಕಾರಣಿಯಾಗಿದ್ದಾರೆ. ಅಂತಹವರು ಉನ್ನತ ಹುದ್ದೆ ಪಡೆಯಬೇಕಿತ್ತು. ಆದರೆ ಪಡೆಯಲಿಲ್ಲ. ಅವರನ್ನ ತುಳಿಯುವ ಯತ್ನ ನಡೆದಿದೆ. ಅಧಿವೇಶನ ನಡೆಯುತ್ತಿದ್ದರೂ ಪ್ರತಿಭಟನೆಯಲ್ಲಿ ಯತ್ನಾಳ್ ಭಾಗವಹಿಸಿದ್ದಾರೆ ಎಂದರು.

ಮಲೆಗೌಡ ಭಾಗದಲ್ಲಿ ನಡೆದಿದೆ 11ನೆ ಹೋರಾಟ‌ ಮಾ. 3 ರಂದು ಗುಲ್ಬರ್ಗ ದಲ್ಲಿ  ಹೋರಾಟ ನಡೆಸಲಾಗುವುದು. ಕನಿಷ್ಠ 50 ಸಾವಿರ ಹೋರಾಟ ನಡೆಸಲಾಗುತ್ತಿದೆ. ಶಿಕಾರಿಪುರದಲ್ಲಿ ತಿಣಕಾಡಿ ಗೆದ್ದಿದ್ದೀರಿ. ಈ ಬಾರಿ ಲೋಕ ಸಭೆ ಚುನಾವಣೆ ಇದೆ. ನಮ್ಮೊಂದಿಗೆ ಕೈಜೋಡಿಸಿ ಎಂದು ಯಡಿಯೂರಪ್ಪನವರ ಹೆಸರು ಹೇಳದೆ ಎಚ್ಚರಿಕೆ ನೀಡಿದರು. ನಂತರ ಸ್ಥಳದಲ್ಲಿ ಮತ್ತೆ ಸಾಂಕೇತಿಕವಾಗಿ ಇಷ್ಟಲಿಂಗ ಪೂಜೆಯನ್ನ ಸ್ವಾಮೀಜಿ ನೆರವೇರಿಸಿದರು.‌ ನಂತರ‌ ಷಡಾಕ್ಷರಿ ಮಂತ್ರ ಪಠಿಸಲಾಯಿತು.

ಇದನ್ನೂ ಓದಿ-https://suddilive.in/archives/8973

Related Articles

Leave a Reply

Your email address will not be published. Required fields are marked *

Back to top button