ಕ್ರೈಂ ನ್ಯೂಸ್

ಪ್ರೊ.ವೀರಭದ್ರಪ್ಪ, ಅನುರಾಧ ಜಿ ಸೇರಿ ಐವರಿಗೆ ಎದುರಾಗಲಿದೆ ಸಂಕಷ್ಟ?

ಸುದ್ದಿಲೈವ್/ಶಿವಮೊಗ್ಗ

ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ವಿಷಯದಲ್ಲಿ ಆಗಿರುವ ಹಗರಣ ಸಾಬೀತಾದ ಬೆನ್ನಲ್ಲೇ ಈ ಹಿಂದಿನ ಐವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರ ಪತ್ರ ಬರೆದಿದೆ. ಇದರಿಂದ‌ ಐವರು ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವ ಎಲ್ಲಾ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರವಾಗಿದೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸೌಲಭ್ಯ ಒದಗಿಸಲು 2021-22ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ರೂ.4.25 ಕೋಟಿಗಳ SCSP ಅನುದಾನವನ್ನು ದುರುಪಯೋಗ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ರವಾನೆಯಾಗಿದೆ‌.

ಕುವೆಂಪು ವಿಶ್ವವಿದ್ಯಾಲಯ, ದಿನಾಂಕ: 14-01-2022 ರಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸೌಲಭ್ಯ ಒದಗಿಸಲು ರೂ.5.00 ಕೋಟಿಗಳ ಅನುದಾನಕ್ಕೆ ಮಂಜೂರಾತಿ ನೀಡಲಾಗಿತ್ತು. ಸದರಿ ಮೊತ್ತದ ಪೈಕಿ ರೂ.4.25 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.

ಅನುದಾನ ದುರುಪಯೋಗ ಮಾಡಿರುವ ಬಗ್ಗೆ ದೂರು ಸ್ವೀಕೃತಗೊಂಡಿದ್ದು, ಈ ಬಗ್ಗೆ ಪರಿಶೀಲಿಸಿ, ವರದಿ ಸಲ್ಲಿಸಲು ಕುವೆಂಪು ವಿಶ್ವವಿದ್ಯಾಲಯಕ್ಕೆ ತಿಳಿಸಲಾಗಿತ್ತು. ವಿಶ್ವವಿದ್ಯಾಲಯದ ಡಾ|| ಕೃಷ್ಣಮೂರ್ತಿ, ಹಿರಿಯ ಪ್ರಾಧ್ಯಾಪಕರು, ವಿಚಾರಣೆ ಮಾಡಿ ವರದಿ ಸಲ್ಲಿಸಿದ್ದು, ದುರುಪಯೋಗದ ಆರೋಪವು ದೃಢಪಟ್ಟಿರುತ್ತದೆ.

ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ ಅಧಿನಿಯಮ 2013ರ ಕಲಂ (24) ರಲ್ಲಿ ಹಣ ದುರುಪಯೋಗವು ಗಂಭೀರ ವಿಷಯವಾಗಿದೆ ಎಂದು ಸರ್ಕಾರ ಅಭಿಪ್ರಾಯ ಪಟ್ಟಿದೆ.

ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ದಿನಾಂಕ: 17-01-2024 ರಂದು ಮಾನ್ಯ ಸಮಾಜ ಕಲ್ಯಾಣ ಸಚಿವರು ಹಾಗೂ ನೋಡಲ್ ಏಜೆನ್ಸಿ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗೊತ್ತುಪಡಿಸಿದ ಪ್ರಾಧಿಕಾರವು ಲಿಖಿತ ರೂಪದಲ್ಲಿ ನೀಡಿದ ದೂರಿನ ಮೇಲೆ ಹೊರತು, ಯಾವುದೇ ನ್ಯಾಯಾಲಯವು ಸದರಿ ಅಪರಾಧದ ಸಂಜ್ಞೆಯತೆಯನ್ನು ತೆಗೆದುಕೊಳ್ಳತಕ್ಕದ್ದಲ್ಲ.” ಎಂದು ಸೂಚಿಸಕಾಗಿದೆ.

ಅದರಂತೆ, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಮೇಲ್ಕಂಡ ಕಾಯ್ದೆಯ ಕಲಂ (25) ರಂತೆ ಸಂಬಂಧಿಸಿದ ಮಾನ್ಯ ನ್ಯಾಯಾಲಯದಲ್ಲಿ Complaint ದಾಖಲಿಸಲು ಹಾಗೂ ಮಾನ್ಯ ನ್ಯಾಯಾಲಯದ ಮುಂದಿನ ಆದೇಶದಂತೆ ಕ್ರಮವಹಿಸುವುದು. ಸದರಿ ದೂರಿನಲ್ಲಿ ಕಾಯ್ದೆಯ ಸೆಕ್ಸನ್ (24) ರೊಂದಿಗೆ IPC ಸೆಕ್ಷನ್ 409 ನ್ನು ಸಹ ಸೇರ್ಪಡೆ ಮಾಡಲಾಗಿದೆ.

ಅದರಂತೆ ನಿವೃತ್ತ ಕುಲಪತಿ ಪ್ರೊ.ವೀರಭದ್ರಪ್ಪ ಬಿ.ಪಿ, ಹಿಂದಿನ ಕುಲಸಚಿವರಾದ (ಆಡಳಿತ) ಅನುರಾಧ ಜಿ(ಈ ಹಿಂದ ಶಿವಮೊಗ್ಗದ ಎಡಿಸಿ ಆಗಿದ್ದರು) ಹಿಂದಿನ ಕುಲಸಚಿವರಾದ (ಪ್ರಭಾರ ಆಡಳಿತ) ಪ್ರೊ.ಗೀತಾ.ಸಿ, ಹಿಙದಿನ ಹಣಕಾಸು ಅಧಿಕಾರಿ‌ ರಾಮಕೃಷ್ಣ ಎಸ್ ಮತ್ತು ಡಾ.ವೈ.ಎಲ್ ರಾಮಚಂದ್ರ ಇವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತೆ ಮತ್ತು ತೆಗೆದುಕೊಂಡಿರುವ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ-https://suddilive.in/archives/8841

Related Articles

Leave a Reply

Your email address will not be published. Required fields are marked *

Back to top button