ಕ್ರೈಂ ನ್ಯೂಸ್

ಗಾಂಜಾ ನಾಶ

ಸುದ್ದಿಲೈವ್/ಶಿವಮೊಗ್ಗ

6 ತಿಂಗಳಲ್ಲಿ ನಡೆದ ಗಾಂಜಾ ದಾಳಿಯಲ್ಲಿ ಪತ್ತೆಯಾದ ಒಟ್ಟು 34 ಕೆ.ಜಿ 825 ಗ್ರಾಂ ಒಣ ಗಾಂಜಾವನ್ನ ಇಂದು ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.

ಜಿಲ್ಲೆಯಾದ್ಯಂತ 42 ಎನ್ ಡಿ ಪಿ ಎಸ್ ಪ್ರಕರಣಗಳು ದಾಖಲಾಗಿದ್ದು ಈ ವೇಳೆ ಸಂಗ್ರಹಿಸಲಾದ ಗಾಂಜಾವನ್ನ ಬೆಂಕಿಗೆ ಹಾಕಿ ಸುಡಲಾಯಿತು. ಶಿವಮೊಗ್ಗ ಜಿಲ್ಲೆಯಾದ್ಯಂತ ಮಾದಕ ವಸ್ತು ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು 42 NDPS ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಳ್ಳಲಾದ ಅಂದಾಜು ಮೌಲ್ಯ 13,16,400/- ರೂಗಳ ಒಟ್ಟು 34 ಕೆಜಿ 825 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು, ಇಂದು ಬೆಳಿಗ್ಗೆ ಮೇ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಸೊಸೈಟಿ (ರಿ) ಕೈಗಾರಿಕಾ ಪ್ರದೇಶ ಮಾಚೇನಹಳ್ಳಿಯಲ್ಲಿ ಶಿವಮೊಗ್ಗ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರ ಸಮ್ಮುಖದಲ್ಲಿ *ನಾಶ ಪಡಿಸಲಾಯಿತು.

ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಎ ಜಿ ಕಾರ್ಯಪ್ಪ, ಶಿವಮೊಗ್ಗ ಜಿಲ್ಲೆ, ಡಾ|| ಗಿರೀಶ್ ಸಿ. ಎಸ್, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಮೇ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸೊಸೈಟಿ (ರಿ), ಡಾ|| ಹರೀಶ್ ದೆಲಂತ ಬೆಟ್ಟು, ಮೇ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸೊಸೈಟಿ (ರಿ),  ಡಿವೈಎಸ್ಪಿಗಳಾದ ಬಾಬು ಆಂಜನಪ್ಪ, ,  ಸುರೇಶ್ ಎಂ ಮತ್ತು ವಿನಾಯಕ್ ಬಿ ಆರ್, ಕ್ಷೇತ್ರ ಸಹಾಯಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿವಮೊಗ್ಗ ರವರು ಉಪಸ್ಥಿತರಿದ್ದರು.

ಮಾದಕ ವಸ್ತು ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ಪೊಲೀಸ್ ಇಲಾಖೆಯಿಂದ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದುಬಂದಲ್ಲಿ, ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿ ಸಹಕರಿಸಿ, ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ-https://suddilive.in/archives/8700

Related Articles

Leave a Reply

Your email address will not be published. Required fields are marked *

Back to top button