ರಾಜಕೀಯ ಸುದ್ದಿಗಳು

ಟೆಂಪೋ ಸ್ಟ್ಯಾಢ್ ಬಳಿ ವಾಹನ ಸಂಚಾರಕ್ಕೆ ಅಅನುಕೂಲ-ಆಮ್ ಆದ್ಮಿಯಿಂದ ಪ್ರತಿಭಟನೆಗೆ ದಿನಾಂಕ ಫಿಕ್ಸ್

ಸುದ್ದಿಲೈವ್/ಶಿವಮೊಗ್ಗ

ಎನ್. ಟಿ ರಸ್ತೆಯ ಟೆಂಪೋ ಸ್ಟ್ಯಾಂಡ್ ಬಳಿ ಸಂಚಾರಿ ವಾಹನ ಸರಿಗೊಳಿಸುವಂತೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪಕ್ಷದ ನಜೀರ್ ಅಹ್ಮದ್, ಎನ್ ಹೆಚ್ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಸುಗಮವಾಗಿಲ್ಲ. ಶಾಲೆ, ಮನೆಗಳು ಹೆಚ್ಚಿದ್ದು ಅನೇಕ ಬಾರಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ರಮ ಜರುಗಿಸಿಲ್ಲ.

ನಿನ್ನೆ ರಸ್ತೆ ಅಪಘಾತ ವಾಗಿದೆ. ಇದನ್ನ. ಖಂಡಿಸಿ, ಫೆ.13 ರಂದು ಎನ್ ಟಿ ರಸ್ತೆಯ ಟೆಂಪೋ ಸ್ಟ್ಯಾಂಡ್ ಬಳಿ ಪ್ರತಿಭಟಿಸಲಾಗುತ್ತಿದೆ. ಇದು ಒಂದೇ ಸ್ಥಳವಲ್ಲ ಗಾಡಿಕೊಪ್ಪ, ಇಲಿಯಾಜ್ ನಗರ ಮೊದಲಾದ ಕಡೆ ವಾಹನ ಸಂಚಾರದ ಬಗ್ಗೆ ಕ್ರಮವಿಲ್ಲ.

ರಾತ್ರಿಯ ವೇಳೆ ರಿಫ್ಲೆಕ್ಟ್ ಹಾಕಬೇಕು, ಸಿಗ್ನಲ್ ಅಳವಡಿಸಬೇಕು. ಮೊನ್ನೆ ಟಪೋವೊಂದು ಡಿವೈಡರ್ ಮೇಲೆ ಹತ್ತಿದೆ. ಜೀವ ಹಾನಿ ಆಗಿಲ್ಲ. ಈ ರೀತಿಯ ಅಪಘಾತಕ್ಕೆ ನಾಳೆ ನಾವು ಒಳಗಾಗಬಹುದು ಜಾಗೃತಿ ಬೇಕಿದೆ ಮತ್ತು ಕ್ರಮ ಬೇಕಿದೆ.

ಸಙಸದರು, ಶಾಸಕರು ಮತ್ತು ಸಚಿವರು ಈ ಬಗ್ಗೆ ಗಮನ ಹರಿಸಿ ಕ್ರಮ ಜರುಗಿಸಬೇಕು.ಫೆ. 13 ರಂದು 10-30 ರಂದು ಪ್ರತಿಭಟಿಸಲಾಗುತ್ತಿದೆ. ಸಿಗ್ನಲ್ ನ್ನೇ ಅಳವಡಿಸಬೇಕೆಂಬ ಆಗ್ರಹವಿಲ್ಲ. ಏನಾದರೂ ಸಿಬ್ಬಂದಿಯನ್ನ ನೇಮಿಸಬೇಕು, ಬ್ಯಾರಿಕೇಡ್ ನಿರ್ಮಿಸಬೇಕು ಎಂದು‌ ನಜೀರ್ ಅಹ್ಮದ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8680

Related Articles

Leave a Reply

Your email address will not be published. Required fields are marked *

Back to top button