ಕ್ರೈಂ ನ್ಯೂಸ್

ನಿಶ್ಚಿತಾರ್ಥವಾಗಿದ್ದ ಯುವತಿ ನೇಣಿಗೆ ಶರಣು

ಸುದ್ದಿಲೈವ್/ಕುಂಸಿ

ನಿಶ್ಚಿತಾರ್ಥ ಆಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜ.24 ರಂದು ನಡೆದಿದ್ದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಬಿ.ಬಿ.ಮುಸ್ಕಾನ್ (20) ಮೃತ ಯುವತಿಯಾಗಿದ್ದಾಳೆ.

ಶಿವಮೊಗ್ಗ ತಾಲೂಕಿನ ರಾಮನಗರದ ನಿವಾಸಿಯಾಗಿದ್ದ ಬಿ.ಬಿ.ಮುಸ್ಕಾನ್ ಗೆ ಮಂಡಗದ್ದೆಯ ಅಲ್ತಾಮಷ್ ಜೊತೆ ವಿವಾಹ‌ ನಿಶ್ಚಿತಾರ್ಥವಾಗಿತ್ತು. ಮದುವೆ ಇಷ್ಟವಿಲ್ಲದ ಕಾರಣ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿ ಬಂದಿದೆ.

ಬೀಬಿ ಮುಸ್ಕಾನ್ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಳು. ವಿವಾಹ ನಿಶ್ಚಯವಾಗಿದ್ದ ಯುವಕನ ವಯಸ್ಸಿನ ಅಂತರ ಹೆಚ್ಚಾದ ಹಿನ್ನೆಲೆ ಮದುವೆಗೆ ಯುವತಿ ನಿರಾಕರಿಸಿದ್ದಳು ಎನ್ಬಲಾಗಿದೆ. ಕುಟುಂಬಸ್ಥರ ಒತ್ತಾಯಕ್ಕೆ ಬಲವಂತದಿಂದ ಯುವತಿ ಮದುವೆಗೆ ಒಪ್ಪಿಕೊಂಡಿದ್ದಳು ಎಂಬ ಹೇಳಿಕೆಗಳು ಹೊರಬಿದ್ದಿದೆ.

ಊಟ ಮುಗಿಸಿಕೊಂಡು ಮಲಗಲು ಕೊಠಡಿಗೆ ತೆರಳಿದ್ದ ಯುವತಿ, ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/7808

Related Articles

Leave a Reply

Your email address will not be published. Required fields are marked *

Back to top button