ರಾಷ್ಟ್ರೀಯ ಸುದ್ದಿಗಳು

ರಾಮೋತ್ಸವದಲ್ಲಿ ಮಿಂದೆದ್ದ ಶಿವಮೊಗ್ಗ

ಸುದ್ದಿಲೈವ್/ಶಿವಮೊಗ್ಹ

ರಾಮೋತ್ಸವದಲ್ಲಿ ಶಿವಮೊಗ್ಗ ಮಿಂದೆದ್ದಿದೆ. ಅಯೋಧ್ಯೆಯಲ್ಲಿ ರಾಮಲಲ್ಲ ಪ್ತತಿಷ್ಠಾಪನಾ ಮತ್ತು ರಾಮ ಮಂದಿರ ಉದ್ಘಾಟನೆಯ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಕರೆದಿರುವ ದೀಪೋತ್ಸವದಲ್ಲಿ ಶಿವಮೊಗ್ಗದ ಬಹುತೇಕ ಗಲ್ಲಿಗಳಲ್ಲಿ ರಂಗೋಲಿ ಮತ್ತು ಹಣತೆ ಯ ದೀಪ ಹಚ್ಚಿ ಸಂಭ್ರಮಿಸಲಾಯಿತು.

ನಗರದಲ್ಲಿ ಶಿವಪ್ಪ ನಾಯಕ ವೃತ್ತದಲ್ಲಿ ಹಿಂದೂ ಸಂಘಟನೆಗಳಿಂದ ದೀಪೋತ್ಸವ ನಡೆಸಲಾಯಿತು. ಮಾಜಿ ಸಚಿವ ಈಶ್ವರಪ್ಪ, ಶಾಸಕರಾದ ಚೆನ್ನಬಸಪ್ಪ ಮತ್ತು ಡಿ.ಎಸ್ ಅರುಣ್, ಮೊದಲಾದ ನಾಯಕರು ಹಣತೆ ದೀಪ ಹಚ್ಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.‌

ಆರಂಭಕ್ಕೂ ಮೊದಲು ರಾಮನ ವೇಶಧಾರಿಯಾಗಿ ಬಂದ ಮಗುವನ್ನ ಎತ್ತಿಕೊಂಡ ಮಾಜಿ ಸಚಿವರು ನಂತರ ಪಟಾಕಿ ಸಿಡಿಸುವ‌ ಸಂಭ್ರಮದಲ್ಲಿ ಭಾಗಿಯಾದರು. ಮೊಮ್ಮಗನ ಕೈಗೆ  ಸುಸ್ಸುರ್ ಬತ್ತಿ ಕೊಟ್ಟು ಮೊಮ್ಮಗನ‌ಕೈ ಹಿಡಿದು ಈಶರಪ್ಪ ಗಾಂಧಿ ಬಜಾರ್ ನ ಪ್ರಮುಖ ಬೀದಿಯಲ್ಲಿ ನಡೆದರು.

ಶಿವಪ್ಪ‌ನಾಯಕ ಪ್ರತಿಮೆ ಯಿಂದ ವಾಸವಿ ಸಮುದಾಯ  ಭವನದ ವರೆಗೆ ಮೆರವಣಿಗೆ ಬಡೆಸಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ದೀಪ ಹಿಡಿದು ಭಾಗವಹಿಸಿದರು. ಮೆರವಣಿಗೆ ಉದ್ದಕ್ಕೂ ಮಹಿಳೆಯರು ದೀಪ ಹಚ್ಚಿದರು.  ಡೊಳ್ಳು ವಾದ್ಯಗಳೊಂದಿಗೆ ಮೆರವಣಿಗೆ ಹೋಗುಬಾಗ ಬಹುತೇಕ ಅಂಗಡಿಗಳ ಮುಂಭಾಗದಲ್ಲಿ ಪಟಾಕಿ ಸಿಡಿಸಿ  ಮರಗು ಹೆಚ್ಚಿಸಲಾಯಿತು.

ಇದರ ಜೊತೆಗೆ ಬಹುತೇಕ ಬಡಾವಣೆಗಳಲ್ಲಿ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ ಐದು ದೀಪಗಳನ್ನ ಹಚ್ಚಲಾಗಿದೆ. ಹೀಗೆ ಗಾಂಧಿ ಬಜಾರ್ ಮತ್ತು ಶಿವಮೊಗ್ಗದ ಜನತೆ ರಾಮೋತ್ಸವದಲ್ಲಿ ಮಿಂದೆದ್ದಿದ್ದಾರೆ.

ಇದನ್ನೂ ಓದಿ-https://suddilive.in/archives/7473

Related Articles

Leave a Reply

Your email address will not be published. Required fields are marked *

Back to top button