ಹಿಂದೂ ಮಹಸಭಾ ಗಣಪತಿ ಉತ್ಸವಕ್ಕೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ದೊರೆತಿದೆ. ಭೀಮೇಶ್ವರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಿನ್ನೆನೇ ನಡೆದಿದ್ದು, ಇಂದು 10-45 ರ ಸಮಯದಲ್ಲಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ.
ಭೀಮೇಶ್ವರ ದೇವಸ್ಥಾನ, ಮಾರಿಕಾಂಬ ದೇವಿ ದೇವಸ್ಥಾನ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ಪ್ರತಿಮೆ, ಎಎ ವೃತ್ತ, ನೆಹರೂ ರಸ್ತೆ, ದುರ್ಗಿ ಗುಡಿ, ಜೈಲ್ ವೃತ್ತ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಡಿವಿಎಸ್ ವೃತ್ತ, ಕೋಟೆ ರಸ್ತೆ ಮೂಲಕ ಭೀಮನ ಮಡಿಲಿನಲ್ಲಿ ಗಣಪತಿ ವಿಸರ್ಜನೆ ಆಗಲಿದೆ.
ಮಹಾವೀರವೃತ್ತದ ಬಳಿ ಕಳೆದಬಾರಿ ಡ್ಯಾನ್ಸ್ಗೆ ವ್ಯಚಸ್ಥೆ ಮಾಡಿದಂತೆ ಈ ಬಾರಿಯೂ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ಮಹಾನಗರ ಪಾಲಿಕೆ ಸದಸ್ಯರು ಶಾಸಕ ಚೆನ್ನಬಸಪ್ಪ ಮೊದಲಾದವರು ರಾಜಬೀದಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ.
ಪ್ರಮುಖ ಜಾಗದಲ್ಲಿ ಹೂವಿನ ಹಾರ, ಕೊಬ್ಬರಿ ಹಾರ, ಪಾನಕ ವ್ಯವಸ್ಥೆ ಮಾಡಲಾಗಿದೆ. ಬಸವೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರಿಂದ ಅನ್ನಸಂತಪರ್ಣೆ ಕಾರ್ಯಕ್ರಮ ಜರುಗಲಿದೆ
ಇದನ್ನೂ ಓದಿ-https://suddilive.in/2023/09/28/ನಗರದ-ವಿವಿಧೆಡೆ-ಕುಡಿಯುವ-ನೀ/
