ಕ್ರೈಂ ನ್ಯೂಸ್

ಹಾಲು ಖರೀದಿಸುವ ನೆಪದಲ್ಲಿಯೂ ನಡೆದಿತ್ತು ಚೈನ್ ಸ್ನ್ಯಾಚಿಂಗ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಡಿ.20 ರಂದು ಧನುರ್ಮಾಸ ಪೂಜೆಗೆ ತೆರಳಿತ್ತಿದ್ದ ಮಹಿಳೆಯರನ್ನ ಟಾರ್ಗೆಟ್ ಮಾಡಿದ್ದ ಖದೀಮರು ಈ ಮೊದಲು ಓಟಿ ರಸ್ತೆಯಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ಗೆ ತೆರಳಿ ಹಾಲುಕೊಳ್ಳುವ ನೆಪದಲ್ಲಿ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.

ಡಿ.20 ಬೆಳ್ಳಂಬೆಳಿಗ್ಗೆ ಕೋಟೆ ರಸ್ತೆಯಲ್ಲಿ, ವಿನೋಬ ನಗರ 60 ಅಡಿ ರಸ್ತೆ, ಆದಿಚುಂಚನ ಗಿರಿಯ ದೇವಸ್ಥಾನದ ಬಳಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಓರ್ವ ಮಹಿಳೆ, ಓರ್ವ ಯುವತಿಯ ಕುತ್ತಿಗೆಯಲ್ಲಿದ್ದ ಮಾಂಗಲ್ಯಸರ ಮತ್ತು ಚಿನ್ನದ ಅಭರಣವನ್ನ ಕಿತ್ತುಕೊಂಡು ಹೋದ ಪ್ರಕರಕ್ಕೂ ಮುನ್ನ  ಓಟಿ ರಸ್ತೆಯಲ್ಲಿರುವ ವೆಂಕಟೇಶ್ವರ ಸಭಾಭವನದ ಎದುರುಗಡೆ ಇರುವ ನಂದಿನಿ ಮಿಲ್ಕ್ ಪಾರ್ಲರ್ ಗೆ ತೆರಳಿ ಹಾಲು ಖರೀದಿಸುವ ನೆಪದಲ್ಲಿ ಮಾಲೀಕಳ ಕುತ್ತಿಗೆಯಲ್ಲಿದ್ದ ತಾಳಿ ಸರವನ್ನ‌ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಓಟಿ ರಸ್ತೆಯ ನಂದಿನಿ ಪಾರ್ಲರ್ ಗೆ ಅಪರಿಚಿತರಿಬ್ಬರು‌ ಬೈಕ್ ನಲ್ಲಿ ಬಂದಿಳಿದಿದ್ದು, ಹಿಂಬದಿ ಸವಾರ100 ರೂ.ಕೊಟ್ಟು ಹಾಲು ಖರೀದಿಸಿದ್ದಾನೆ. ಮಾಲೀಕರು 5 ರೂ. ಬಿಸ್ಕತ್ ಮತ್ತು 70 ರೂ. ಚೇಂಜ್ ನೀಡಿದ್ದಾರೆ. ಗ್ರಾಹಕನ ಸೋಗಿನಲ್ಲಿದ್ದ ಅಪರಿಚಿತ ಬಿಸ್ಕತ್ ಬೇಡ ಪೇಡಾ ಕೊಡಲು ಹೇಳಿದ್ದಾನೆ. ಚಾಕ್ಲೇಟ್ ಕೊಡಲು‌ ಮಾಲೀಕಳು ಹಿಂದಿರುಗಿದಾಗ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾನೆ.

ಮಾಲೀಕಳು ಸಹ ಮಾಂಗಲ್ಯ ಸರ ಗಟ್ಟಿ ಹಿಡಿದಾಗ ಮಾಂಗಲ್ಯ ಸರ ತುಂಡಾಗಿದೆ. 47 ಗ್ರಾಂ ಮಾಂಗಲ್ಯ ಸರದಲ್ಲಿ 20 ಗ್ರಾಂ ಅಪರಿಚಿತನ ಕೈ ಸೇರಿದೆ. ಇದರ ಮೌಲ್ಯ 1 ಲಕ್ಷದ 10 ಸಾವಿರ ಎಂದು  ಅಂದಾಜಿಸಲಾಗಿದೆ. ಜರ್ಕಿನ್, ಮಂಕಿ‌ಕ್ಯಾಪ್ ಮತ್ತು‌ ಮಾಸ್ಕ್ ಧರಿಸಿಕೊಂಡು ಬಂದ‌ ಇಬ್ವರು ಅಪರಿಚತರಿಂದ ಈ ಕೃತ್ಯ ನಡೆದಿದೆ. ಈ ಬಗ್ಗೆ ಮಾಲೀಕರಾದ ಅನುಪಮ‌ ಭಟ್  ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿ.19 ರಂದು ಯಲಕಪ್ಪನ ಕೇರಿಯಲ್ಲಿ ಘಟನೆ

ಡಿ.19 ರಂದು ಬೆಳಿಗ್ಗೆ 7-45 ರಂದು  ಒಬಿ ರಸ್ತೆಯಲ್ಲಿರುವ ನಿವಾಸಿ 80 ವರ್ಷದ ರುಕ್ಮಿಣಿ ಎಂಬುವರು ಯಲಕಪ್ಪನಕೇರಿಯಲ್ಲಿರುವ‌ ಕೋದಂಡ‌ರಾಮ‌ ಎಂಬುವರ ಮನೆಗೆ ಹೋಗಿ ನಾಟಿ ಕೋಳಿ ಮೊಟ್ಟೆ ಖರೀದಿಸಿ ವಾಪಾಸ್ ಮನೆಗೆ ಹೋಗುವ ಸಂದರ್ಭದಲ್ಲಿ ಬೈಕ್ ನಲ್ಲಿ ಲ ಅಪರಿಚಿತರಿಬ್ಬರು ವೃದ್ದೆಯ ಮುಂದೆ ಬಂದು ಬೈಕ್ ನಿಲ್ಲಿಸಿದ್ದಾರೆ.

ಹಿಂಬದಿ ಕುಳಿತವನು ವೃದ್ಧೆಯ ಬಳಿ ಬಂದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬೈಕ್ ಚಲಾಯಿಸುತ್ತಿದ್ದವನು‌ ಫುಲ್ ಕವರ್ ಹೆಲ್ಮೆಟ್ ಮತ್ತು ಹಿಂಬದಿಯಲ್ಲಿದ್ದವನು  ಟೋಪಿ ಧರಿಸಿದ್ದನು ಎಂದು ಗುರುತು ಹಿಡಿದಿದ್ದಾರೆ. ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/5244

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373