ಕ್ರೈಂ ನ್ಯೂಸ್

ಭದ್ರವತಿಯಲ್ಲಿ ಮುಂದುವರೆಯುತ್ತಿದೆಯೇ ದ್ವೇಷದ ರಾಜಕಾರಣ?

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಡೈರಿ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ನಡೆದ ಘಟನೆ ರಾಜಕೀಯ ಪಡೆದುಕೊಂಡಿದೆ. ಮತ್ತೊಂದು ದ್ವೇಷದ ರಾಜಕಾರಣ ಮುಂದುವರೆದಂತೆ ಕಂಡುಬರುತ್ತಿದೆ. ಗುರುವಾರ ಬಿಜೆಪಿ-ಜೆಡಿಎಸ್ ನ ಪ್ರತಿಭಟನೆ ನಡೆಯಲಿದೆಯೋ ಅಥವಾ ಇಲ್ಲಿಗೆ ಮುಕ್ತಾಯಗೊಳ್ಳಲಿದೆಯೋ ಕಾದು ನೋಡಬೇಕಿದೆ.

ಕಾಚಗೊಂಡನ ಗ್ರಾಮದಲ್ಲಿ ಡೈರಿ ನಿರ್ದೇಶಕ ಸ್ಥಾನಕ್ಕೆ   ಡಿ.17 ನಾನಪತ್ರ ಸಲ್ಲಿಸಲು ಕೊನೆಯದಿನವಾಗಿತ್ತು. ಕೊನೆಯ ದಿನಾಂಕದ ವೇಳೆ ವೈರ ಮುಡಿ, ಗದ್ದೆಮನೆ ಜಯರಾಮ್, ಶ್ರೀನಿವಾಸ, ಗೋವಿಂದಪ್ಪನವರ ಪರ ಕೆಇಬಿ ಗುತ್ತಿಗೆದಾರ ಸಿ ರವಿಕುಮಾರ್ ಸ್ಥಳದಲ್ಲಿಯೇ ಸ್ನೇಹಿತರ ಜೊತೆ ಡೈರಿಗೆ ತೆರಳಿದ್ದರು.

ನಾಮಪತ್ರ ಪರಿಶೀಲನೆ ಮುಗಿಸಿ ಕಾಚಗೊಂಡ ಗ್ರಾಮದ ಡೈರಿಯಲ್ಲಿದ್ದ ಮಾಜಿ ಅಧ್ಯಕ್ಷ ಆನಂದ್ ಮತ್ತು ಚಂದ್ರಶೇಖರ್ ಡಿ  ಹೊರಬರುತ್ತಿದ್ದಂತೆ ಗುತ್ತಿಗೆದಾರ ರವಿಕುಮಾರ್ ಅವರನ್ನ ಉದ್ದೇಶಿಸಿ ನಿನ್ನಿಂದ ಡೈರಿ ಅಧ್ಯಕ್ಷನಾಗುವ ಅವಕಾಶ ಕೈತಪ್ಪಿದೆ ಎಂದು ಆರೋಪಿಸಿ ಕಲ್ಲಿನಿಂದ ಹಲ್ಲೆ ನಡೆಸಲಸಲಾಗಿದೆ ಎಂದು ಆರೋಪಿಸಿ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.  ಚಂದ್ರಶೇಖರ್ ಡಿ ಮತ್ತು ಮಾಜಿ ಶಿಮೂಲ್ ಅಧ್ಯಕ್ಷ ಆನಂದ್ ವಿರುದ್ಧ 307 ಪ್ರಕರಣ ದಾಖಲಾಗಿದೆ.

ಈ ಪ್ರಕರಣ ಜೆಡಿಎಸ್ ಮತ್ತು ಬಿಜೆಪಿಯವರ ಪ್ರತಿಭಟನೆಗೆ ಕಾರಣವಾಗಿದೆ ನಿನ್ನೆ ಬಿಹೆಪಿ ಮತ್ತು ಜೆಡಿಎಸ್ ಹೊಸಮನೆ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದಾರೆ. ಕಾಚಗೊಂಡನ ಗ್ರಾಮದಲ್ಲಿ ಡಿ. 17 ರಂದು  307 ಪ್ರಕರಣ ನಡೆದಿಲ್ಲ. ಇಡೀ ಗ್ರಾಮಸ್ಥರನ್ನೇ ನೀವು ಕೇಳಿಕೊಳ್ಳಿ. ರವಿಕುಮಾರ್ ಮತ್ತು ಚಂದ್ರಶೇಖರ್ ಮತ್ತು ಮಾಜಿ ಶಿಮೂಲ್ ಅಧ್ಯಕ್ಷ ಆನಂದ್ ನಡುವೆ ಮಾತಿನ ಚಕಮಕಿಯಾಗಿ ನಂತರ ಮೂರು ಜನ ಒಟ್ಟಿಗೆ ಊಟ ಮಾಡಿಕೊಂಡು ಹೊರಬಿದ್ದಿದ್ದಾರೆ.

ಆದರೆ ಸಂಜೆಯ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬಿಜೆಪಿ ನಿನ್ಬೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆದಿದೆ. 307 ಪ್ರಕರಣ ಕೈಬಿಡದಿದ್ದರೆ ಗುರುವಾರ ದೊಡ್ಡಮಟ್ಟದಲ್ಲಿ ಪ್ರತಿಭಟನೆಗೆ ಎರಡೂ ಪಕ್ಷದಲ್ಲಿ ಮುಂದುವರೆಯಲಿದೆ ಎಂಬ ಎಚ್ಚರಿಕೆಯನ್ನ ನೀಡಲಾಗಿದೆ.

ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕುಅಧ್ಯಕ್ಷ ಧರ್ಮಪ್ರಸಾದ್, ಜೆಡಿಎಸ್ ನಿಂದ ಅಜಿತ್ ಗೌಡ (ಅಪ್ಪಾಜಿ ಗೌಡ) ಮೊದಲಾದವರು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/5017

Related Articles

Leave a Reply

Your email address will not be published. Required fields are marked *

Back to top button