ರಾಜ್ಯ ಸುದ್ದಿಗಳು

ಕರ್ನಾಟಕ ಮದ್ಯಪ್ರಿಯ ಹೋರಾಟ ಸಂಘದ ಬೇಡಿಕೆ ಏನು ಗೊತ್ತಾ?

ಸುದ್ದಿಲೈವ್/ಬೆಳಗಾವಿ

ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಮಧ್ಯಪ್ರಿಯರ ಹೋರಾಟ ಸಂಘ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಮನವಿ ಸ್ವೀಕರಿಸಿದ ಸಚಿವ ಸಂತೋಷ್ ಲಾಡ್ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿರುವುದು ಭರವಸೆ ಹೆಚ್ಚಿಸಿದೆ.

ನಿತ್ಯ ದುಡಿ… ಸತ್ಯ ನುಡಿ… ಸ್ವಲ್ಪ ಕುಡಿ… ಮನೆಗೆ ನಡಿ ಎಂಬ ವಾಕ್ಯದೊಂದಿಗೆ ಈ ಪ್ರತಿಭಟನೆ ನಡೆದಿದೆ. ಬೇಡಿಕೆ ವಿಚಿತ್ರವೆಂದರೂ ಸತ್ಯವಾಗಿದೆ. ಕುಡುಕ ಎಂಬ ವ್ಯಂಗ್ಯ ನುಡಿ ಬೇಡ ಮದ್ಯ ಪ್ರಿಯ ಎಂದು ಪದಬಳಸಬೇಕು. ಎಮ್.ಆರ್.ಪಿ ದರದಲ್ಲಿ ಮದ್ಯ ಮಾರಾಟ ಮಾಡಬೇಕು. ಇನ್ಸುರೆನ್ಸ್ ನೀಡಬೇಕು ಎಂದು ಆಗ್ರಹಿಸಿದರು.

  1. ಹೆಚ್ಚು ಹಣ ಪಡೆದರೆ ಲೈಸೆನ್ಸ್ ರದ್ದು ಮಾಡಬೇಕು.. ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು. ಡಿಸೆಂಬರ್ 31 ರಂದು ರಿಯಾಯಿತಿ ದರದಲ್ಲಿ ಮದ್ಯ ವಿತರಣೆ ಮಾಡಬೇಕು.. ಡ್ರಿಂಕ್ & ಡ್ರೈವ್ ಪ್ರಕರಣ ಹಾಕಿ ಸಾವಿರಾರು ರೂ. ದಂಡ ಸ್ವೀಕರಿಸುವುದು ನಿಲ್ಲಬೇಕು.
  • ಮದ್ಯ ಸೇವಿಸಿ ಮೃತಪಟ್ಟರೆ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು. ಕುಡುಕ ಎಂಬ ಪದ ನಿಷೇಧಿಸಿ ಮದ್ಯಪ್ರಿಯರು ಎಂದು ಘೋಷಿಸಬೇಕು.
    ಬಾರ್‌ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಮದ್ಯಪ್ರಿಯರ ಭವನ ಸ್ಥಾಪಿಸಬೇಕು.
  • ಪ್ರತಿ ಬಾಟಲ್ ಮೇಲೆ ಹಣ ಪಡೆದು ಇನ್ಸುರೆನ್ಸ್ ಜಾರಿಗೊಳಿಸಬೇಕು ಎಂಬುದು ಮದ್ಯಪ್ರಿಯರ ಬೇಡಿಕೆಯಾಗಿದೆ.

ಇದನ್ನೂ ಓದಿ-https://suddilive.in/archives/4886

Related Articles

Leave a Reply

Your email address will not be published. Required fields are marked *

Back to top button