ಕ್ರೈಂ ನ್ಯೂಸ್

ಬೈಕ್ ವೀಲಿಂಗ್-ಇಬ್ಬರು ಬೈಕ್ ಸವಾರರು ಮತ್ತು ಮಾಲೀಕರಿಗೆ ನ್ಯಾಯಾಲಯದ ಮೂಲಕ ದಂಡ

ಸುದ್ದಿಲೈವ್/ಶಿವಮೊಗ್ಗ

ಬೈಕ್ ವೀಲಿಂಗ್ ಮಾಡಿದ ಆರೋಪಿಗಳಿಗೆ ಮತ್ತು ವೀಲಿಂಗ್ ನಡೆಸಲು ಸಹಕರಿಸಿದ ಬೈಕ್ ಮಾಲೀಕನಿಗೂ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ‌

ದಿನಾಂಕ:15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎಂಬ ಯುವಕರಿಬ್ಬರು ಎರಡು YAMAHA RX ಬೈಕಿಗಳಲ್ಲಿ ಅತಿ ವೇಗ, ಅಜಾಗರುಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದರು.

ಈ ಬಗ್ಗೆ ಗುನ್ನೆ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಕುರಿತು ತನಿಖಾಧಿಕಾರಿಗಳಾಗಿ ಪಿಎಸ್ಐ ತಿರುಮಲೇಶ್ ರನ್ನ ನೇಮಿಸಲಾಗಿತ್ತು. ಬೈಕ್ ಗಳ ಚಾಲಕರು & ಮಾಲೀಕ ಸೇರಿ 3 ಜನ ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣ ಪತ್ರವನ್ನು ಸಲ್ಲಿಸಿದ್ದರು.

ಘನ ನ್ಯಾಯಾಲಯದಲ್ಲಿ  ಕಿರಣ್ ಕುಮಾರ್ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣ ವಾದ ಮಂಡಿಸಿದ್ದು, ಘನ 3ನೇ ಎಸಿಜೆ & ಜೆಎಂಎಫ್ ಸಿ, ಶಿವಮೊಗ್ಗ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಪ್ರಕರಣದ ಆರೋಪಿತರ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಧೀಶರಾದ ಶ್ರೀ ಮಾಯಪ್ಪ ರವರು ನಿನ್ಬೆ ತೀರ್ಪು ಪ್ರಕಟಿಸಿದರು.

ಆರೋಪಿ 1) ಫೈಸಲ್ ಅಹ್ಮದ್, 20 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 11,000 ರೂ, ದಂಡ, 2) ಸೂಫಿಯಾನ್ ಖಾನ್, 21 ವರ್ಷ ಟ್ಯಾಂಕ್ ಮೊಹಲ್ಲಾ , ಶಿವಮೊಗ್ಗ ಟೌನ್ ಈತನಿಗೆ 8000 ರೂ ದಂಡ ಮತ್ತು ಬೈಕಿನ ಆರ್ ಸಿ ಮಾಲೀಕನಾದ 3) ಮೊಹಮ್ಮದ್ ಸೈಫುಲ್ಲಾ, 50 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 4500 ರೂ ದಂಡ ವಿಧಿಸಿ ಅದೇಶಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4415

Related Articles

Leave a Reply

Your email address will not be published. Required fields are marked *

Back to top button