ಕಮರಿದ ಬದುಕಿಗೆ ಪಾಲಿಕೆ ಆಸರೆಯಾಗಲಿ

ಸುದ್ದಿಲೈವ್/ಶಿವಮೊಗ್ಗ

ಅ.1 ರಂದು ರಾಗಿಗುಡ್ಡದಲ್ಲಿ ನಡೆದ ಕಲ್ಲುತೂರಾಟದಲ್ಲಿ 18 ಮನೆಗಳು ಹಾನಿಯಾಗಿದ್ದು, ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲು ಈಗಾಗಲೇ ಅಂದಾಜು ವೆಚ್ಚವನ್ನ ಅಂದಾಜಿಸಿ ವರದಿ ನೀಡಲಾಗಿದೆ.
ಈ ಹಣವನ್ನೇ ನೀಡಲು ಮಾನವೀಯತೆಯ ಆಧಾರದ ಮೇರೆಗೆ ನೀಡಲು ಮೀನಾಮೇಷಾ ಎಣಿಸಲಾಗುತ್ತಿತ್ತಾ ಎಂಬ ಅನುಮಾನಕ್ಕೆ ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹೊರಬಿದ್ದಿದೆ. ಗಲಭೆ ನಡೆದು ಇಂದಿಗೆ 1 ತಿಂಗಳು 21 ದಿನಗಳು ಕಳೆದಿದೆ. ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಎಂಬಂತೆ ರಾಗಿಗುಡ್ಡದ ನಿವಾಸಿಗಳ ಕಥೆಯಾಗಿದೆ.
ಕಟ್ಟರ್ ಹಿಂದುತ್ವ ಎಂಬ ಭಜನೆ ಮಾಡುವ ಬಿಜೆಪಿ ಪಕ್ಷವೇ ಗಲಭೆಯ ಆರಂಭದಲ್ಲಿ ಸಹಾಯಕ್ಕೆ ನಿಂತ ಶ್ರೀಕೃಷ್ಣನಂತೆ ಕಂಗೊಳಿಸಿದರೂ ಪಕ್ಷದ ವತಿಯಿಂದ ಹಣ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಕಾಂಗ್ರೆಸ್ ಇಲ್ಲಿನ ಉಸಾಬರಿಗೆ ಹೋಗಿಲ್ಲ. ಆದರೆ ಈ ಪಕ್ಷದ ಪಾಲಿಕೆಯ ಸದಸ್ಯ ಧೀರಾಜ್ ಹೊನ್ನವಿಲೆ ಗಲಭೆಯ ಫಾಲೋಅಪ್ ನಲ್ಲಿ ಇದ್ದಿದ್ದು ಮರೆತುಹೋಗಿದ್ದ ಘಟನೆಯನ್ನ ನೆನಪಿಸಿಕೊಟ್ಟಿದ್ದಾರೆ.
ಮಾಜಿ ಸಚಿವರ ಈಶ್ವರಪ್ಪನವರ ವೈಯುಕ್ತಿಕ ಖಾತೆಯಿಂದ ಇಲ್ಲಿನ ಕೆಲವರಿಗೆ ಹಣ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪಕ್ಷದ ನಿಲುವು ಅಚ್ಚರಿ ಮೂಡಿಸಿದೆ. ಸಧ್ಯಕ್ಕೆ ಪಿಡಬ್ಲ್ಯೂಡಿ ಇಂಜಿನಿಯರ್ ಗಳು ಅಂದಾಜು ವೆಚ್ಚ ಮಾಡಿದ್ದಾರೆ. 18 ಮನೆಗಳು ಹಾನಿಯಾಗಿರುವ ಬಗ್ಗೆ ಇಲಾಖೆಯ ಇಂಜಿನಿಯರ್ ಗಳು 3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ. ಈ ಹಣವನ್ನ ಪಾಲಿಕೆಯ ವತಿಯಿಂದಮಾನವೀಯತೆಯ ದೃಷ್ಠಿಯಿಂದ ನೀಡಲು ಇಂದು ಸಭೆ ತೀರ್ಮಾನಿಸಿದೆ. ಇದೊಂದು ಒಳ್ಳೆಯ ಬೆಳವಣಿಗೆಯಾದರೂ ಇಲ್ಲಿನ ಜನ ನಿಜವಾಗಿಯೂ ಒದ್ದಾಡಿಹೋಗಿದ್ದಾರೆ.
ರಾಗಿಗುಡ್ಡದ 9 ನೇ ತಿರುವಿನ ಮನೆಗಳಲ್ಲಿ ಬಿದ್ದ ಕಲ್ಲುಗಳ ಫಳ್ ಎಂಬ ಶಬ್ದಗಳು ನಿವಾಸಿಗರಲ್ಲಿ ಭಯ ಹುಟ್ಟಿಸಿದೆ. ಪರಿಹಾರ ನೀಡಲು ಯಾವ ಪಕ್ಷನೂ ಮುಂದೆ ಬಂದಿಲ್ಲ. ಕಲ್ಲಿನ ಶಬ್ದಗಳಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಪಕ್ಷಗಳಿಂದ ಜನ ಪಾಠ ಕಲಿಯಬೇಕಿದೆ. ಅಪಘಾತದಲ್ಲಿ ಮೃತಗೊಂಡವರಿಗೆ ಪಾಲಿಕೆ ಪರಿಹಾರ ನೀಡಿದ ಉದಾಹರಣೆಗಳಿವೆ.
ಅದರಂತೆ ಪಾಲಿಕೆ ಪರಿಹಾರ ನೀಡಲು ಇಂದು ತೀರ್ಮಾನಿಸಿದೆ. ಪಿಡಬ್ಲೂಡಿ ಇಂಜಿನಿಯರ್ ಗಳು ಅಂದಾಜಿಸಿರುವ ಹಣಕ್ಕಿಂತ ಹೆಚ್ಚಿನ ಹಣವನ್ನ ಕೊಡುವಂತಾಗಲಿ. ಕಮರಿರುವ ಬದಕಿಗೆ ಪಾಲಿಕೆ ಮತ್ತೆ ಆಸರೆಯಾಗಲಿ.
ಇದನ್ನೂ ಓದಿ-https://suddilive.in/archives/3406
