ಷಡಾಕ್ಷರಿ ವರ್ಗಾವಣೆ ಹಿಂದೆ ದ್ವೇಷದ ರಾಜಕಾರಣ-ಬಿ.ವೈ.ರಾಘವೇಂದ್ರ

ಸುದ್ದಿಲೈವ್/ಶಿವಮೊಗ್ಗ

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ ವಿಚಾರ ಕುರಿತು ಸಂಸದ ರಾಘವೇಂದ್ರ ಕೂಲ್ ಆಗಿ ಉತ್ತರಿಸಿದ್ದಾರೆ. ಗೋಪಾಲಕೃಷ್ಣ ಅವರು ಒಬ್ಬ ಹಿರಿಯ ಶಾಸಕರು. ಅವರಲ್ಲಿಯೇ ಅಧಿಕಾರಕ್ಕಾಗಿ ಪೈಪೋಟಿ ಇದೆ. ವಿಪಕ್ಷದವರನ್ನು ಯಾರು ಹೆಚ್ಚಾಗಿ ಬೈಯುತ್ತಾರೆ ಅವರಿಗೆ ಸ್ಥಾನ ಸಿಗುತ್ತದೆ ಅನ್ಸುತ್ತೆ ಎಂದು ಟಾಂಗ್ ನೀಡಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮತದಾರರಿಗೆ ಉತ್ತರ ಕೊಡೋದು, ಇವರಿಗೆ ಅಲ್ಲ. ನನಗೆ ಮತ ಕೊಟ್ಟಿರುವವರು ಮತದಾರರು, ನಾನು ಅವರಿಗೆ ನಿಷ್ಠೆ ಇರುವವನು ಎಂದಿದ್ದಾರೆ.
ಡಿಸಿಸಿ ಬ್ಯಾಂಕಿನಲ್ಲಿ ಹಗರಣ ಆರೋಪ ವಿಚಾರ
ಡಿಸಿಸಿ ಬ್ಯಾಂಕ್ ನ ವಿಚಾರದಲ್ಲಿ ದೇವರ ದಯೆಯಿಂದ ಆ ಕೆಲಸ ಮಾಡುವ ದರ್ದು ನನಗಿಲ್ಲ. ಅವರ ಆರೋಪ ಮುಚ್ವಿಕೊಳ್ಳುವ ಸಲುವಾಗಿ ನಮ್ಮ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ.ಯಾರೇ ಮಾಡಿದರೂ ಅದು ತಪ್ಪು ತನಿಖೆ ಆಗಲಿ ಎಂದರು.
ಎಲುಬಿಲ್ಲದ ನಾಲಗೆ ಏನು ಬೇಕಾದರೂ ಮಾತನಾಡುತ್ತಾರೆ. ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಒಂದೇ ಪರಿಹಾರವಲ್ಲ. ಷಡಾಕ್ಷರಿ ಆಗಲಿ ಮತ್ತೊಬ್ಬರು ಆಗಲಿ ಸರಕಾರ ಬಂದಾಗ ಅಧಿಕಾರಿಗಳು ಬದಲಾಗುತ್ತಾರೆ ಎಂದರು.
ಒಳ್ಳೆಯ ಅಧಿಕಾರಿಗಳಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. 7 ನೇ ವೇತನ ಆಯೋಗದ ಬಗ್ಗೆ ಚರ್ಚೆ ಮಾಡಬೇಕೋ ಹೊರತು ಅಧಿಕಾರಿಗಳ ವರ್ಗಾವಣೆ ಮಾಡಿದ್ರೆ ಏನು ಆಗಲ್ಲ ಎಂದರು.
ಆಡಳಿತ ವ್ಯವಸ್ಥೆ ತಿದ್ದಿಕೊಳ್ಳಬೇಕು
ಅಧಿಕಾರಿ ವರ್ಗಾವಣೆ ಮಾಡಿದ್ರೆ ಏನು ಪ್ರಯೋಜನ ಆಗಲ್ಲ. ಗ್ಯಾರಂಟಿ ಯೋಜನೆ ಜಾರಿಗೆ ಹಣ ವಿನಿಯೋಗಿಸುತ್ತಿದ್ದಾರೆ. ಅಭಿವೃದ್ಧಿಗೆ ಹಣ ಕೊಡ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ-https://suddilive.in/archives/2714
