ಪ್ರಚೋದನಕಾರಿ ಭಾಷಣ ಮಾಜಿ ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಪ್ರಚೋದನಕಾರಿ ಭಾಷಣ ಆರೋಪ ಹಿನ್ನಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರಿಂದ ಸುಮೋಟೋ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹರ್ಷನ ಕೊಲೆಯ ನಂತರ ಹಿಂದೂಗಳು ಮುಸ್ಲೀಂರ ವಿರುದ್ಧ ಮಾರಿ ಹಬ್ಬದಲ್ಲಿ ಕುರಿಕೊಚ್ಚಿ ಹಾಕಿದ ಹಾಗೆ ಕೊಚ್ಚಬಹುದಿತ್ತು. ಆದರೆ ಹಿಂದೂ ಸಮಾಜ ಆ ರೀತಿ ಪ್ರತಿಕ್ರಿಯಸದೆ ಶಾಂತಿ ರೀತಿಯಲ್ಲಿ ನಡೆದುಕೊಂಡಿದೆ.
ಇಲ್ಲಿನ ಹಿಂದೂ ಹೆಣ್ಣುಮಕ್ಕಳು ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮಳನ ರಕ್ತ ಹಂಚಿಕೊಂಡು ಬೆಳೆದವರು. ಅಂತಹವರನ್ನ ಕೆಣಕಿದರೆ ಕೆಣಕಿದವರನ್ನ ಕೊಚ್ಚಿ ಹಾಕುತ್ತಾರೆ
ಈ ರೀತಿಯ ಹೇಳಿಕೆ ಸುಮೋಟೋ ಪ್ರಕರಣ ದಾಖಲಾತಿಗೆ ಕಾರಣವಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಐಪಿಸಿ ಸೆಕ್ಷನ್ 153ಎ ಮತ್ತು 504 ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/1151
